ಥಾಣೆ (ಮಹಾರಾಷ್ಟ್ರ): ಮದುವೆ ಮನೆಗೆ ಬೆಂಕಿ ಬಿದ್ದು ಪೆಂಡಾಲ್ ಹೊತ್ತಿ ಉರಿಯುತ್ತಿದ್ದರೂ ಬಂದ ಒಂದಿಷ್ಟು ನೆಂಟರು ನಿಶ್ಚಿಂತೆಯಿಂದ ಊಟ ಸವಿಯುತ್ತಿದ್ದಾರೆ. ಮಹಾರಾಷ್ಟ್ರದ ಥಾಣೆ ಭೀವಂಡಿಯಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಮುಂದೆ ಅತಿಥಿಗಳು ಮದುವೆಯ ಭೂರಿ ಭೋಜನ ಸವಿಯುತ್ತಿರುವುದನ್ನು ಕಾಣಬಹುದು. ಅವರ ಹಿಂಬದಿಯಲ್ಲಿಯೇ ಪೆಂಡಾಲ್‌ಗೆ ಬೆಂಕಿ ಹತ್ತಿ ಧಗಧಗನೆ ಉರಿಯುತ್ತಿದೆ. ಬೆಂಕಿಗೆ ಹೆದರಿ ಹಲವರು ಚೀರುತ್ತಿದ್ದಾರೆ. ಅತ್ತಿತ್ತ ಓಡಾಡುತ್ತಿದ್ದಾರೆ. ಆದರೆ ಕೆಲವು ಪುಣ್ಯಾತ್ಮರು ಮಾತ್ರ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ.
ಅತ್ತ ಇರುವ ಜನರು ಬೆಂಕಿಯನ್ನು ನಂದಿಸಲು ಅತ್ತಿಂದಿತ್ತ ಓಡಾಡುತ್ತಿರುವುದೂ ವಿಡಿಯೋದಲ್ಲಿ ಕಾಣಿಸುತ್ತದೆ. ಆದರೆ ಇವರು ಮಾತ್ರ ಏನೂ ಆಗಿಲ್ಲ ಎನ್ನುವಂತೆ ನೆಮ್ಮದಿಯಿಂದ ಇದ್ದಾರೆ.
ಈ ಘಟನೆಯಲ್ಲಿ ಆರು ಬೈಕ್ಗಳು, ಹಲವು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಮದುವೆ ಮನೆ ಸಂಪೂರ್ಣ ಸುಟ್ಟುಹೋಗಿದೆ. ನಾಲ್ಕು ಅಗ್ನಿಶಾಮಕ ದಳಗಳು ಹರಸಾಹಸ ಪಟ್ಟು ಬೆಂಕಿ ನಂದಿಸಿವೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಲಿ, ಪ್ರಾಣಹಾನಿಯಾಗಲಿ ಆಗಿಲ್ಲ.
ಇಲ್ಲಿದೆ ನೋಡಿ ವಿಡಿಯೋ: