ಲಂಡನ್: ಕಳೆದ ವರ್ಷವೇ ಕರೊನಾ ಲಸಿಕೆ ಪಡೆಯುವ ಮೂಲಕ ವಿಶ್ವದ ಮೊದಲ ವ್ಯಕ್ತಿ ಎಂದು ಹೆಸರುವಾಸಿಯಾಗಿದ್ದ ಲಂಡನ್‌ನ 81 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ.
ವಿಲಿಯಂ ಷೇಕ್ಸ್‌ಪಿಯರ್ ಎಂಬ ವ್ಯಕ್ತಿ ಇವಾಗಿದ್ದು. 2020ರ ಡಿಸೆಂಬರ್ 8 ರಂದು, ಕೋವಿಡ್ -19 ಲಸಿಕೆ ಪಡೆದಿದ್ದರು.
ಜರ್ಮನಿಗೆ ಸೇರಿದ ಬಯೋಎನ್‌ಟೆಕ್ ಮತ್ತು ಅಮೆರಿಕ ಔಷಧ ಸಂಸ್ಥೆ ಫಿಜರ್ ಜಂಟಿಯಾಗಿ ಅಭಿವೃದ್ದಿ ಪಡಿಸಿದ್ದ ಲಸಿಕೆ ಇದಾಗಿದೆ. ಅನಾರೋಗ್ಯ ಸಮಸ್ಯೆಗಳಿಂದ ಇದೇ ಆಸ್ಪತ್ರೆಗೆ ಸೇರಿದ್ದ ಷೇಕ್ಸ್‌ಪಿಯರ್ ಈ ತಿಂಗಳ 20 ರಂದು ಮೃತಪಟ್ಟಿದ್ದು, ಇದೀಗ ವಿಷಯ ಹೊರಕ್ಕೆ ಬಂದಿದೆ.
ಷೇಕ್ಸ್‌ಪಿಯರ್ ಅವರು ಪತ್ನಿ ಜಾಯ್, ಇಬ್ಬರು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಮಾರ್ಗರೇಟ್ ಕೀನನ್ ಎಂಬ 91 ವರ್ಷದ ಮಹಿಳೆ ಕೋವಿಡ್ ಲಸಿಕೆ ಪಡೆದು ಲಸಿಕೆ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.