More

    ಲಸಿಕೆ ಪಡೆಯುವ ಸಮಯದ ಲಭ್ಯತೆ ಇನ್ನು ತಿಳಿಯೋದು ಸುಲಭ- ಇದಕ್ಕಾಗಿ ರೂಪುಗೊಂಡಿದೆ ಈ ತಂತ್ರಾಂಶ

    ಬೆಂಗಳೂರು: ಈಗ ಕರೊನಾ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಲಸಿಕೆಯನ್ನು ಯಾವಾಗ ಪಡೆಯಬೇಕು, ಇದಕ್ಕಾಗಿ ಯಾವ ಸಮಯದ ಲಭ್ಯತೆ ಇದೆ ಎಂದು ತಿಳಿದುಕೊಳ್ಳುವುದು ಹಲವರಿಗೆ ಕಷ್ಟವಾಗಿದೆ. ಇದನ್ನೀಗ ನೀಗಿಸಲಿದೆ ಹೆಲ್ತಿಫ್ಯಾಮಿಲಿ ಕಂಪೆನಿಯ http://VaccinateMe.in

    ಆರೋಗ್ಯ ಮತ್ತು ಫಿಟ್‌ನೆಟ್‌ ಕಂಪೆನಿಯಾಗಿರುವ ಹೆಲ್ತಿಫ್ಯಾಮಿಲಿ ತಂತ್ರಾಂಶ ಇದಾಗಿದ್ದು, ಇದಾಗಲೇ ದೇಶಾದ್ಯಂತ 700 ಜಿಲ್ಲೆಗಳಲ್ಲಿ ಮೂರು ದಶಲಕ್ಷ ಬಳಕೆದಾರರು ಇದನ್ನು ಬಳಲುತ್ತಿದ್ದಾರೆ. . ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈನಲ್ಲಿ ಇದರ ಕಚೇರಿಗಳು ಇದ್ದು, ಅಲ್ಲಿಯ ಸಿಬ್ಬಂದಿ ಈ ಸೇವೆ ಒದಗಿಸುತ್ತಿದ್ದಾರೆ.

    ಕೋವಿಡ್‌-9 ಲಸಿಕೆ ಪಡೆಯುವ ಸಮಯದ ಲಭ್ಯತೆ ಕುರಿತಂತೆ ಕನ್ನಡ ಸೇರಿಂದ 11 ಭಾಷೆಗಳಲ್ಲಿ ಈಗ ಮಾಹಿತಿ ಪಡೆಯಬಹುದಾಗಿದೆ. ಇಂಗ್ಲಿಷ್‌, ಹಿಂದಿ, ಮರಾಠಿ, ಗುಜರಾತಿ, ತೆಲಗು, ತಮಿಳು, ಬಂಗಾಳಿ, ಒರಿಯಾ, ಪಂಜಾಬಿ ಹಾಗೂ ಮಲಯಾಳ ಭಾಷೆಗಳಲ್ಲಿಯೂ ಇದನ್ನು ನೋಡಬಹುದು.

    ಒಂದು ವೇಳೆ ಲಸಿಕೆ ಪಡೆಯುವ ಸಮಯ ಲಭ್ಯವಿಲ್ಲದಿದ್ದರೆ ಹೊಸ ಲಸಿಕೆ ಪಡೆಯುವ ಸಮಯ ಲಭ್ಯವಾಗುತ್ತಿದ್ದಂತೆಯೇ ಎಸ್‌ಎಂಎಸ್‌ ಅಲರ್ಟ್‌ ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್‌ ಇಲ್ಲದವರೂ ಮಾಹಿತಿ ಪಡೆಯಲು ಅನುಕೂಲ ಅಗುವಂತೆ ಎಸ್‌ಎಂಎಸ್‌ ಸೌಲಭ್ಯ ಒದಗಿಸಲಾಗಿದೆ.

    ಇದು ಶುರುವಾದ ಮೊದಲ ದಿನವೇ 25 ಲಕ್ಷ ಮಂದಿ ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ತಂತ್ರಂಶವನ್ನು ಸುಮಾರು 5 ಲಕ್ಷ ಜನರು ಪ್ರತಿನಿತ್ಯ ಬಳಸುತ್ತಿದ್ದಾರೆ ಎಂದು ಹೆಲ್ತಿಫ್ಯಾಮಿಲಿ ಸಹ ಸಂಸ್ಥಾಪಕ ಹಾಗೂ ಇಸಿಒ ತುಷಾರ್‌ ವಸಿಷ್ಠ ಹೇಳಿದ್ದಾರೆ.

    http://VaccinateMe.in  ಇಲ್ಲಿ ಲಾಗಿನ್‌ ಆಗುವ ಮೂಲಕ ಅಲ್ಲಿ ಕೇಳಿರುವ ಮಾಹಿತಿಗಳನ್ನು ಒದಗಿಸಿ ಸೇವೆಯನ್ನು ಪಡೆಯಬಹುದು.

    ಕೋವಿಡ್ ನಿರ್ವಹಣೆಗೆ ‘ಆಕಾಂಕ್ಷಾ‘: ದೇಶದಲ್ಲಿಯೇ ಪ್ರಥಮ ಪೋರ್ಟಲ್‌ಗೆ ಸಿಎಂ ಚಾಲನೆ

    ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಕೇಂದ್ರದಿಂದ ರಾಜ್ಯಕ್ಕೆ ಮತ್ತಷ್ಟು ಔಷಧ: 1221 ಸೀಸೆ ಬಿಡುಗಡೆ

    ಗೋಮಾತೆಯ ಅಪ್ಪುಗೆಯೇ ಚಿಕಿತ್ಸೆ: ತಾಸಿಗೆ 15 ಸಾವಿರ ರೂ. ಕೊಟ್ಟು ಹಸು ತಬ್ಬಿಕೊಳ್ಳುತ್ತಿರೋ ಅಮೆರಿಕನ್ನರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts