ನ್ಯೂಸ್

ಮಧ್ಯರಾತ್ರಿ ಧಗಧಗ ಹೊತ್ತಿ ಉರಿದ ಕಾರ್ಖಾನೆ- ಅಗ್ನಿ ಶಾಮಕ ದಳಕ್ಕೆ ಸಾಧ್ಯವಾಗದೇ ವಾಯುಪಡೆ ಕಾರ್ಯಾಚರಣೆ

suchetana

ಶ್ರೀನಗರ: ಶ್ರೀನಗರದ ಉಧಂಪುರ್ ಜಿಲ್ಲೆಯ ಬಟಾಲ್ ಬಲಿಯನ್ ಇರುವ ರಾಸಾಯಿಕ ಕಾರ್ಖಾನೆಯೊಂದು ಮಧ್ಯರಾತ್ರಿ ಧಗ ಧಗ ಹೊತ್ತಿ ಉರಿದಿರುವ ಘಟನೆ ನಡೆದಿದೆ.

ಧನುಕಾ ಅಗ್ರಿಟೆಕ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ. ಷಾರ್ಟ್‌ ಸರ್ಕೀಟ್‌ನಿಂದಾಗಿ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮೂಲಗಳು ಹೇಳಿವೆ.

ಬೆಂಕಿಯ ಕೆನ್ನಾಲಿಗೆ ಬಹುದೂರದವರೆಗೆ ಕಂಡುಬಂದಿದೆ. ಮಧ್ಯರಾತ್ರಿ ಸುಮಾರು 12.30 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಆಗಮಿಸಿದೆ. ಅಷ್ಟು ಹೊತ್ತಿಗಾಗಲೇ ಕಾರ್ಖಾನೆಯ ತುಂಬೆಲ್ಲಾ ಬೆಂಕಿ ಹರಡಿಕೊಂಡಿದೆ. ಎಂಟು ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ಮಾಡುತ್ತಿದೆ. ಇಷ್ಟಾದರೂ ಬೆಂಕಿ ನಂದಿಸಲು ಕಷ್ಟವಾಯಿತು. ಇದೇ ಕಾರಣಕ್ಕೆ ವಾಯುಪಡೆಯಿಂದ ಬೆಂಕಿ ನಂದಿಸುವ ಕ್ರಮ ತೆಗೆದುಕೊಳ್ಳಲಾಗಿದೆ.

ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳದ ಅಧಿಕಾರಿ, ಕೈಗಾರಿಕಾ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ನಾವು ಬೆಂಕಿ ನಂದಿಸಲು ಪ್ರಯತ್ನ ಪಡುತ್ತಿದ್ದರು ಕೂಡ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಕಾರ್ಖಾನೆ ಮತ್ತು ಸ್ಥಳದಲ್ಲಿದ್ದ ವಾಹನಗಳು ಪೂರ್ತಿ ಸುಟ್ಟು ಕರಕಲಾಗಿದೆ.

ಬೆಂಕಿ ಅವಘಡದ ವಿಡಿಯೋ ಇಲ್ಲಿದೆ: ಕೃಪೆ ಜಮ್ಮು ಲಿಂಕ್ಸ್‌ ನ್ಯೂಸ್‌