ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರೋಧದ ಕೂಗು ದಿನದಿಂದ ದಿನಕ್ಕೆ ಬಿಕ್ಕಟ್ಟಾಗುತ್ತಲೇ ಸಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗೃಹ ಸಚಿವ ಅಮಿತ್ ಷಾ ಹಾಗೂ ಅನೇಕ ನಾಯಕರು ಇದು ರೈತರ ಪರವಾಗಿರುವ ಕಾನೂನು ಎಂದು ಮನವೊಲಿಸಲು ಮಾಡಿರುವ ಪ್ರಯತ್ನಗಳೆಲ್ಲವೂ ವಿಫಲವಾಗುತ್ತಿರುವ ಬೆನ್ನಲ್ಲೇ ಮುಗ್ಧ ರೈತರ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯ ಕರಾಳಮುಖಗಳು ಒಂದೊಂದಾಗಿ ಬಯಲಾಗುತ್ತಿವೆ.
ಎರಡು ದಿನಗಳ ಹಿಂದಷ್ಟೇ ರೈತರ ಹೆಸರಿನಲ್ಲಿ ಕೆಲವರು ಪ್ಲಕಾರ್ಡ್ ಹಿಡಿದು ನಕ್ಸಲ್ ಹಾಗೂ ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ ಕೆಲವರ ಬಿಡುಗಡೆಗೆ ಕೋರಿದ್ದು, ಭಾರಿ ಸುದ್ದಿಯಾಗಿತ್ತು. ಅತ್ಯಂತ ಘೋರ ಆರೋಪದ ಮೇಲೆ ಜೈಲುಪಾಲಾಗಿರುವ ಕೆಲವರ ಫೋಟೋ ಹಿಡಿದು ಅವರ ಬಿಡುಗಡೆ ಮಾಡಿ ಎಂಬ ಕೂಗು ರೈತರ ಹೋರಾಟದ ನಡುವೆ ಸೇರಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇದರ ಬಗ್ಗೆ ಇನ್ನೂ ಸಂಪೂರ್ಣ ಸತ್ಯಾಂಶ ಹೊರಬೀಳುವ ಮೊದಲೇ ಇದೀಗ ರೈತರ ಹೆಸರಿನಲ್ಲಿ ನಡೆಯುತ್ತಿರುವ ಇನ್ನೊಂದು ಕರಾಳ ಮುಖ ಬಯಲಾಗಿದೆ. ಅದೇನೆಂದರೆ, ರೈತರ ಪ್ರತಿಭಟನೆಗೆ ತಾವು ಬೆಂಬಲ ನೀಡುತ್ತಿರುವುದಾಗಿ ಮುಂದೆ ಬಂದು ತಾವು ರೈತರು ಎಂದು ಹೇಳಿಕೊಳ್ಳುತ್ತಿರುವ ಕೆಲವರು ಅಸಲಿಗೆ ರೈತರೇ ಅಲ್ಲ ಎಂಬ ಆರೋಪ ಕೇಳಿಬಂದಿದೆ.
ಅಕ್ಷಯ್ ಕುಮಾರ್, ದರ್ಶನ್ ಪಾಲ್, ಪ್ರೇಮ್ ಸಿಂಗ್ ಬ್ನಾಂಗು, ಜಗ್‌ಮೋಹನ್ ಸಿಂಗ್ ಪಟಿಯಾಲ, ಹನನ್ ಮೊಲ್ಲ, ಕವಿತಾ ಕುರುಂಗತಿ, ಯೋಗೆಂದ್ರ ಯಾದವ್, ಕೀರನ್‌ಜೀತ್ ಸೆಖೋ ಇವರು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದು, ಅಸಲಿಗೆ ಇವರು ರೈತರೇ ಅಲ್ಲ.
ಇವರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಪಟಿಯಾಲದ ನಿವಾಸಿ, ನಿವೃತ್ತ ವೈದ್ಯರಾಗಿರುವ ದರ್ಶನ್ ಪಾಲ್, ಕ್ರಾಂತಿಕಾರಿ ಕಿಸಾನ್ ಯೂನಿಯನ್, ಪಂಜಾಬ್ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ. ಮಾತ್ರವಲ್ಲದೇ ಸಿಪಿಐ (ಮಾವೋವಾದಿ) ಪಕ್ಷದ ಸಕ್ರಿಯ ಕಾರ್ಯಕರ್ತ.
ಪಶ್ಚಿಮ ಬಂಗಾಳದ ಹನನ್ ಮೊಲ್ಲ ಉಲುಬೆರಿಯಾ ಪಿಸಿ ಕ್ಷೇತ್ರದ ಸಿಪಿಐ ಸಂಸದ. ಸಿಪಿಐ (ಮಾರ್ಕ್ಸ್‌ವಾದಿ) ಪಕ್ಷದ ಜತೆ ಗುರುತಿಸಿಕೊಂಡಿರುವ ಇವರು ಡಿವೈಎಫ್ಐ ಸಂಘಟನೆಯ ಮುಖ್ಯ ಕಾರ್ಯದರ್ಶಿಯಾಗಿದ್ದವರು. ಈಗ ಎಐಕೆಎಸ್ ಮುಖ್ಯ ಕಾರ್ಯದರ್ಶಿ ಹಾಗೂ ಆಲ್ ಇಂಡಿಯಾ ಎಗ್ರಿಕಲ್ಚರ್ ವರ್ಕರ್ಸ್ ಯೂನಿಯನ್ ಜಂಟಿ ಕಾರ್ಯದರ್ಶಿ.
ಸ್ವರಾಜ್ ಇಂಡಿಯಾ ಸಂಘಟನೆಯ ಕನ್ವೀನರ್ ಆಗಿರುವ ಯೋಗೆಂದ್ರ ಯಾದವ್ ರೈತ ನಿಯೋಗದ ಭಾಗವಲ್ಲದಿದ್ದರೂ, ಸರ್ಕಾರದ ಪ್ರತಿನಿಧಿಗಳೊಂದಿಗೆ ಹಲವು ಬಾರಿ ಮಾತುಕತೆ ನಡೆಸಿರುವವರು. ಇವರು ಸಂಯುಕ್ತ ಕಿಸಾನ್ ಮೋರ್ಚಾದ ಸಕ್ರೀಯ ಸದಸ್ಯ.
ಸಿಪಿಐ ( ವಾವೋವಾದಿ) ಪಕ್ಷದ ನಿಕವರ್ತಿಯಾಗಿರುವ ಜಗ್‌ಮೋಹನ್ ಸಿಂಗ್ ಪಟಿಯಾಲ, ಸಿಪಿಐ (ಮಾರ್ಕಿಸ್ಟ್) ಪಕ್ಷದ ನಿಕಟವರ್ತಿಯಾಗಿರುವ ಕೀರನ್‌ಜೀತ್ ಸೆಖೋ ಕುಲ್‌ಹಿಂದ್ ಹಾಗೂ ಕುಲ್‌ಹಿಂದ್ ಕಿಸಾನ್ ಫೆಡರೇಶನ್ ಸದಸ್ಯರಾಗಿರುವ ಪ್ರೇಮ್ಸಿಂಗ್ ಬ್ನಾಂಗು ಈ ಮೂವರೂ ವಕೀಲರು. ಜಗ್‌ಮೋಹನ್ ಸಿಂಗ್ ಪಟಿಯಾಲ ಬಿಕೆಯು ಸಂಘಟನೆ ಸದಸ್ಯ. ಕೀರನ್‌ಜೀತ್ ಸೆಖೋ ಕುಲ್‌ಹಿಂದ್ ಕಿಸಾನ್ ಫೆಡರೇಶನ್ ಸದಸ್ಯ.
ಒಡಿಶಾದ ಅಕ್ಷಯ್ ಕುಮಾರ್ ನವಿ ನಿರ್ಮಾಣ ವಿಕಾಸ್ ಸಂಘಟನೆ (ಎನ್ಎನ್ವಿಎಸ್) ಸದಸ್ಯರಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಎಂದು ಗುರುತಿಸಿಕೊಂಡಿರುವ ಇವರು ನರ್ಮದಾ ಬಚಾವ್ ಅಂದೋಲನ ಹಾಗೂ ಆಝಾದಿ ಬಚಾವ್ ಆಂದೋಲನದ ಪ್ರಮುಖ ಸದಸ್ಯ. ಸದ್ಯ ಎನ್ಎನ್ವಿಎಸ್ ಹಾಗೂ ಫಾರ್ಮರ್ ಫ್ರಂಟ್ ಆಫ್ ನವ ನಿರ್ಮಾಣ ಸಮಿತಿ ವಕ್ತಾರ. ಯುವ ಭಾರತಿ ಸಂಘಟನೆ ಸಂಚಾಲಕ.
ಕವಿತಾ ಕುರುಂಗತಿ ಎಐಕೆಎಸ್ಸಿಸಿ ಸಂಘಟನೆ ಸದಸ್ಯೆಯಾಗಿರುವ ಕವಿತಾ ಕುರುಂಗತಿ, ಸಾಮಾಜಿಕ ಕಾರ್ಯಕರ್ತೆ ಎಂದು ಗುರುತಿಸಿಕೊಂಡಿದ್ದು, ಮಹಿಳಾ ಕಿಸಾನ್ ಅಧಿಕಾರ್ ಮಂಚ್ ಹಾಗೂ ಅಲೈಯನ್ಸ್ ಫಾರ್ ಸಸ್ಟೆನೇಬಲ್ ಹೊಲಿಸ್ಟಿಕ್ ಅಗ್ರಿಕಲ್ಚರ್ ಸ್ಥಾಪಕರಾಗಿದ್ದಾರೆ .