ನ್ಯೂಸ್

ಕತಾರ್​ನಲ್ಲಿ ವಿಶ್ವ ಪರಿಸರ ದಿನಾಚರಣೆ: ಒಂದು ವರ್ಷದ ಬಳಿಕ ಅಂತರ್ಜಾಲದ ಹೊರಗೆ ಕಾರ್ಯಕ್ರಮ!

suchetana

ಕತಾರ್​: ಇಲ್ಲಿನ ಕರ್ನಾಟಕ ಸಂದ ವತಿಯಿಂದ ವಿಶ್ವ ಪರಿಸರ ದಿನವನ್ನು ಕಳೆದ ಶುಕ್ರವಾರ ಆಚರಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ಈವರೆಗೆ ಎಲ್ಲ ಕಾರ್ಯಕ್ರಮಗಳನ್ನು ಇಂಟರ್​ನೆಟ್​ ಮೂಲಕವೇ ನಡೆಸಲಾಗುತ್ತಿತ್ತು. ಸುಮಾರು ಒಂದು ವರ್ಷದ ನಂತರ ಅಂತರ್ಜಾಲದ ಹೊರಗೆ ಮಾಡಿದ ಮೊದಲ ಕಾರ್ಯಕ್ರಮ ಎಂಬುದು ಈ ಸಲದ ಪರಿಸರ ದಿನಾಚರಣೆಯ ಹೆಗ್ಗಳಿಕೆಯಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಸ್ಯಾನಿಟೈಸರ್​ ಬಳಸಿ, ಮಾಸ್ಕ್​ ಧರಿಸಿ ಕರೊನಾ ಮಾರ್ಗಸೂಚಿಗಳನ್ನು ಪಾಲಿಸಿದರು. ಎತಿರಾಝ್​ ತಂತ್ರಾಂಶ ಬಳಸಲಾಯಿತು. ಬಹುತೇಕ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಗಲ್ಫಾರ್​ ಅಲ್​ ಮಿಸ್ನಾದ್​ ಸಂಸ್ಥೆಯ ನೂತನ ಜೆರ್ಯ್​ ಅಲ್​ ಸಮೂರ್​ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ಸಭಿಕರು ಮಾವು- ಬೇವು ಮುಂತಾದ ಸಸಿಗಳನ್ನು ನೆಟ್ಟರು.

ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯ ಬಾಬುರಾಜನ್​, ಗಲ್ಫಾರ್​ ಅಲ್​ ಮಿಸ್ನಾದ್​ ಸಂಸ್ಥೆಯ ಮೂಲ ಸೌಕರ್ಯಗಳ ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕ ಹೇಮಚಂದ್ರನ್​ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ಸಂದ ಪ್ರಧಾನ ಕಾರ್ಯದಶಿರ್ ಮುರಳೀಧರ್​ ರಾವ್​, ಕರ್ನಾಟಕ ಮೂಲದ ಇತರ ಸಹೋದರ ಸಂಗಳಾದ ತುಳು ಕೂಟ, ಬಂಟ್ಸ್​ ಕತಾರ್​, ಕೆ.ಎಂ.ಸಿ.ಎ, ಎಂ.ಸಿ.ಎ, ಎಂ.ಸಿ.ಸಿ. ಹಾಗೂ ಎಸ್​.ಕೆ.ಎಂ.ಡಬ್ಲೂ.ಎ. ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪರಿಸರ ದಿನಾಚರಣೆಯ ಅವಶ್ಯಕತೆ ಮತ್ತು ಮಹತ್ವವನ್ನು ಸಂದ ಜಂಟಿ ಕಾರ್ಯದಶಿರ್ ತಿಳಿಸಿಕೊಟ್ಟರು. ಸಂದ ಪರಿಸರ ಮತ್ತು ಮಾಹಿತಿ ತಂತ್ರಾನ ಕಾರ್ಯದಶಿರ್ ಕುಮಾರಸ್ವಾಮಿ ವಂದನಾರ್ಪಣೆ ಮಾಡಿದರು.