ರೈಲ್ವೇ ಸಚಿವಾಲಯದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ರೈಲು ಭೂಮಿ ಅಭಿವೃದ್ಧಿ ಪ್ರಾಧಿಕಾರ (ರೈಲ್ ಲ್ಯಾಂಡ್ ಡೆವಲಪ್ವೆುಂಟ್ ಅಥಾರಿಟಿ- ಆರ್ಎಲ್ಡಿಎ) ದೇಶಾದ್ಯಂತ ಆರಂಭಿಸುತ್ತಿರುವ ವಿವಿಧ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅರ್ಹ, ಪ್ರತಿಭಾವಂತ ಇಂಜಿನಿಯರಿಂಗ್ ಪದವೀಧರರಿಂದ ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
ಸಿವಿಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಗೇಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿರಬೇಕು. ಗುತ್ತಿಗೆ ಆಧಾರದಲ್ಲಿ 3 ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.
ಎಲ್ಲಿಲ್ಲಿ ನೇಮಕಾತಿ?:
ಬೆಂಗಳೂರು, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ್, ಉತ್ತರಪ್ರದೇಶ, ಹರಿಯಾಣ, ಸೂರತ್, ಗುಜರಾತ್, ಜಮ್ಮು-ಕಾಶ್ಮೀರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮುಂಬೈ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ, ಉತ್ತರಪ್ರದೇಶ, ಪಶ್ಚಿಮಬಂಗಾಳ ಸೇರಿ ಇನ್ನೂ ನಿರ್ಧಾರವಾಗದ 4 ಕೇಂದ್ರಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ಶೈಕ್ಷಣಿಕ ಅರ್ಹತೆ: ಸಿವಿಲ್ ಇಂಜಿನಿಯರಿಂಗ್ನಲ್ಲಿ ಪೂರ್ಣಾವಧಿಯಲ್ಲಿ ಬಿಇ/ ಬಿ.ಟೆಕ್ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಎಂಇ, ಎಂಟೆಕ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಎಲ್ಲರಿಗೂ ಗೇಟ್ ಅಂಕಗಳನ್ನು ಪರಿಗಣಿಸಲಾಗುತ್ತದೆ.
ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಕನಿಷ್ಠ 21 ವರ್ಷ, ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ಮೂಲ ವೇತನ 35,000 ರೂ. ಇದ್ದು, ಪಿಎಫ್, ಮೊಬೈಲ್ ಕಾಲ್ ಭತ್ಯೆ, ಹಾಗೂ ಇತರ ಭತ್ಯೆಗಳನ್ನು ಸೇರಿಸಿ ಒಟ್ಟು ಮಾಸಿಕ 54,600 ರೂ. ವೇತನ ನೀಡಲಾಗುವುದು. 5,00,000 ರೂ. ಮೌಲ್ಯದ ಆರೋಗ್ಯವಿಮೆಗೆ ಒಳಪಡಿಸಲಾಗುವುದು.
ಆಯ್ಕೆ ಪ್ರಕ್ರಿಯೆ: ಸಿವಿಲ್ ಇಂಜಿನಿಯರಿಂಗ್ ಗೇಟ್ ಪರೀಕ್ಷೆಯಲ್ಲಿ ಪಡೆದ ಅಂಕವನ್ನು ಪರಿಗಣಿಸಿ ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಮಾಡಲಾಗುವುದು. ಇಬ್ಬರು ಅಭ್ಯರ್ಥಿಗಳು ಒಂದೇ ಅಂಕ ಪಡೆದರೆ ಅವರ ವಯಸ್ಸಿನ ಆಧಾರದಲ್ಲಿ ಹಿರಿಯರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು 3-6 ತಿಂಗಳು ತರಬೇತಿಯಲ್ಲಿಡಲಾಗುವುದು.
ಸೇವಾ ಬಾಂಡ್: ಆಯ್ಕೆಯಾಗುವ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸುವುದಾಗಿ 50,000 ರೂ. ಮೊತ್ತದ ಸೇವಾ ಬಾಂಡ್ ನೀಡಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 23.12.2021
ಅರ್ಜಿ ಸಲ್ಲಿಸುವ ಮೇಲ್ ಐಡಿ: psecontract@gmail.com
ಅಧಿಸೂಚನೆಗೆ: https://bit.ly/3DTQ3f8
ಮಾಹಿತಿಗೆ: http://rlda.indianrailways.gov.in