More

    ವಿವಿಧ ತಾಂತ್ರಿಕ ಪದವೀಧರರಿಗೆ ಅಣುವಿದ್ಯುತ್‌ಸ್ಥಾವರದಲ್ಲಿದೆ ಉದ್ಯೋಗ- 21 ಹುದ್ದೆಗಳಿಗೆ ಆಹ್ವಾನ

    ಪರಮಾಣು ಇಂಧನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಪ್ರಸ್ತುತ ಕೈಗಾ ಅಣು ವಿದ್ಯುತ್ ಸ್ಥಾವರ ಸೇರಿ ವಿವಿಧೆಡೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂದರ್ಶನ ನಡೆಸುತ್ತಿದೆ.
    ಒಟ್ಟು ಹುದ್ದೆಗಳು: 21

    ಮಹಾರಾಷ್ಟ್ರದ ತಾರಾಪುರ್, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಕೋಟಾ ಮೊದಲಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿರುವವರು ಅರ್ಜಿ ಸಲ್ಲಿಸಬಹುದು. ಇಸಿಐಎಲ್​ನ ಯೋಜನೆಗಳ ಅವಶ್ಯಕತೆಗೆ ತಕ್ಕಂತೆ 1 ವರ್ಷದ ಅವಧಿಗೆ ಸ್ಥಿರ ಒಪ್ಪಂದದ ಆಧಾರದ ಮೇಲೆ ವಿವಿಧ ಹಂತಗಳಲ್ಲಿ ಟೆಕ್ನಿಕಲ್ ಆಫೀಸರ್, ಸೈಂಟಿಫಿಕ್ ಅಸಿಸ್ಟೆಂಟ್ ಹಾಗೂ ಜೂನಿಯರ್ ಆರ್ಟಿಸನ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದ್ದು, ಸಾಮಾನ್ಯವರ್ಗದ ಅಭ್ಯರ್ಥಿಗೆ 15 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 5, ಎಸ್​ಸಿಗೆ 1 ಸ್ಥಾನ ಮೀಸಲಿರಿಸಲಾಗಿದೆ.

    ಹುದ್ದೆ, ಸಂಖ್ಯೆ ವಿವರ

    * ಟೆಕ್ನಿಕಲ್ ಆಫೀಸರ್ (ಕೆಟಗರಿ1 ರಿಂದ 8) – 12

    * ಸೈಂಟಿಫಿಕ್ ಅಸಿಸ್ಟೆಂಟ್ (ಕೆಟಗರಿ 1ರಿಂದ 3) – 4

    * ಜೂನಿಯರ್ ಆರ್ಟಿಸನ್ – 5

    ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಇನ್​ಸ್ಟ್ರುಮೆಂಟೇಷನ್, ಕಂಪ್ಯೂಟರ್ ಸೈನ್ಸ್, ಇನ್​ಫಮೇಷನ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದು, ಸೈಂಟಿಫಿಕ್ ಅಸಿಸ್ಟೆಂಟ್​ಗೆ ಡಿಪ್ಲೊಮಾ ಹಾಗೂ ಜೂ. ಆರ್ಟಿಸನ್​ಗೆ ಐಟಿಐ ಕೋರ್ಸ್ ಮಾಡಿದ್ದು, ಎಲ್ಲದರಲ್ಲೂ ಕನಿಷ್ಠ ಶೇ.60 ಅಂಕ ಪಡೆದಿರಬೇಕು.

    ವಯೋಮಿತಿ: ಟೆಕ್ನಿಕಲ್ ಅಸಿಸ್ಟೆಂಟ್​ಗೆ ಗರಿಷ್ಠ 30 ವರ್ಷ, ಸೈಂಟಿಫಿಕ್ ಅಸಿಸ್ಟೆಂಟ್ ಹಾಗೂ ಜೂನಿಯರ್ ಆರ್ಟಿಸನ್​ಗೆ ಗರಿಷ್ಠ 25 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

    ವೇತನ: ಜೂನಿಯರ್ ಆರ್ಟಿಸನ್​ಗೆ ಮಾಸಿಕ 18,564 ರೂ., ಸೈಂಟಿಫಿಕ್ ಅಸಿಸ್ಟೆಂಟ್​ಗೆ 20,384 ರೂ., ಟೆಕ್ನಿಕಲ್ ಆಫೀಸರ್​ಗೆ ಮಾಸಿಕ 23,000 ರೂ. ವೇತನ ನಿಗದಿಯಾಗಿದೆ.

    ಆಯ್ಕೆ ಪ್ರಕ್ರಿಯೆ: ಹುದ್ದೆಗಳಿಗೆ ಅನುಸಾರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕೆಲ ಹುದ್ದೆಗೆ ಶೈಕ್ಷಣಿಕ ಹಂತದಲ್ಲಿ ಪಡೆದ ಅಂಕ ಆಧರಿಸಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಇನ್ನು ಕೆಲ ಹುದ್ದೆಗಳಿಗೆ ಶೈಕ್ಷಣಿಕ ಅಂಕದ ಜತೆಗೆ ಲಿಖಿತ ಪರೀಕ್ಷೆ/ ಟ್ರೇಡ್ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಕೈಗಾದಲ್ಲಿನ ಹುದ್ದೆಗಳಿಗೆ o. 1/1, 2nd floor, LIC Building, Sampige Road, Malleswaram, Bengaluru – 560 003 ವಿಳಾಸದಲ್ಲಿ ಸಂದರ್ಶನ ನಡೆಸಲಾಗುವುದು.

    ಸಂದರ್ಶನ ನಡೆಯುವ ದಿನಾಂಕ:

    ಕೋಟಾದಲ್ಲಿ ಡಿ.2ರಂದು ಸಂದರ್ಶನ ನಡೆಯುವುದು, ಉಳಿದ ಸ್ಥಳಗಳಲ್ಲಿ ಡಿ.4ರಂದು ಸಂದರ್ಶನ ನಡೆಸಲಾಗುವುದು.

    ಅಧಿಸೂಚನೆಗೆ: https://bit.ly/3FLez2S

    ಮಾಹಿತಿಗೆ: http://www.ecil.co.in

    ಅಕ್ಕಿ, ಕೋಳಿ, ಕುರಿ ಕೊಟ್ಟು ದೀನದಲಿತರನ್ನು ದೈನೇಸಿ ಸ್ಥಿತಿಯಲ್ಲಿಟ್ಟ ಕಾಂಗ್ರೆಸ್- ಸಚಿವ ಕಿಡಿ

    ರೇಪಿಸ್ಟ್‌ಗಳಿಗೆ ಗಲ್ಲಿನ ಬದಲು ಜೀವಾವಧಿ ಶಿಕ್ಷೆ ನೀಡಿದ ಹೈಕೋರ್ಟ್‌: ಹೀಗೇಕೆ? ತೀರ್ಪಿನಲ್ಲಿ ಇದೆ ಇದಕ್ಕೆ ಉತ್ತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts