More

    ಯೋಜನೆ ಸಂಪೂರ್ಣ ಲಾಭ ಪಡೆದುಕೊಳ್ಳಿ

    ಬಸವಕಲ್ಯಾಣ: ಬೇಸಿಗೆಯಲ್ಲಿ ಯಾರು ಗುಳೆ ಹೋಗಬಾರದು, ನಿರಂತರವಾಗಿ ಉದ್ಯೋಗ ಖಾತ್ರಿ ಕೆಲಸ ಸಿಗಲಿ ಎಂಬ ಉದ್ದೇಶದಿಂದ ಅಭಿಯಾನ ಪ್ರಾರಂಭಿಸಲಾಗಿದೆ. ಹೀಗಾಗಿ ನರೇಗಾ ಕೂಲಿ ಕಾರ್ಮಿಕರು ಬೇಸಿಗೆ ತಿಂಗಳಲ್ಲಿ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.

    ಯರಂಡಿಗಿ ಗ್ರಾಮದಲ್ಲಿ ಮಂಗಳವಾರ ನಡೆದ ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಹಾಗೂ ಲೋಕಸಭೆ ಚುನಾವಣೆಯ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ನರೇಗಾ ಸ್ಥಳದಲ್ಲಿ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕೆಲಸ ಮಾಡುವ ಸ್ಥಳದಲ್ಲಿ ನೀರಿನ ವ್ಯವಸ್ಥೆ ಮತ್ತು ನೇರಳಿನ ವ್ಯವಸ್ಥೆ ಮಾಡಲು ಅವಕಾಶ ಕೂಡ ನೀಡಲಾಗಿದೆ. ಕಾರ್ಮಿಕರು ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.

    ಮೇ ೭ರಂದು ಲೋಕಸಭೆ ಚುನಾವಣೆ ನಿಮಿತ್ತ ಮತದಾನ ನಡೆಯಲಿದೆ. ಅಂದು ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಹಾಗೂ ನಿಮ್ಮ ಚುನಾವಣೆ ಗುರಿತಿನ ಚೀಟಿಯಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಅವುಗಳನ್ನು ನಿಮ್ಮ ಮೊಬೈಲ್ ನಲ್ಲಿ ಸರಿಪಡಿಸಿಕೊಳ್ಳುಲು ಅವಕಾಶ ಕಲ್ಪಸಲಾಗಿದೆ. ಒಟ್ಟಿನಲ್ಲಿ ಮತದಾನ ಮಾತ್ರ ಕಡ್ಡಾಯ ವಾಗಿ ಮಾಡಬೇಕು ಎಂದು ಹೇಳಿದರು.

    ಗ್ರಾಪಂ ವ್ಯಾಪ್ತಿಗೆ ಒಳಪಡುವ ಹಣಮಂತವಾಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿ ಕೆಲಸಕ್ಕೆ ಬಂದ ಕಾರ್ಮಿಕರ ಹೆಸರು ಮಾತ್ರ ಹಾಕಬೇಕು ಹೊರತು, ಗೈರು ಇರುವ ಕಾರ್ಮಿಕರ ಹಾಜರಾತಿಯನ್ನು ಯಾವುದೇ ಕಾರಣಕ್ಕೂ ಹಾಕಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಪಿಡಿಒ ಜ್ಯೋತಿ ಕಾವಡೆ, ದತ್ತಾತ್ರಿ, ರಾಕೇಶ ಐನೋಳಿ, ಐಇಸಿ ಸಂಯೋಜಕ ವೀರಾರೆಡ್ಡಿ, ಟಿ.ಎ.ಮಾಣಿಕ ಮೋರೆ, ಕಾಯಕ ಮಿತ್ರ ರೇಷ್ಮಾ, ಡಿಇಒ ದೀಕಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts