ನ್ಯೂಸ್

ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್​ ಶಾಕ್​! ಅಧ್ಯಕ್ಷ ಸೇರಿದಂತೆ ಎಂಟು ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆ

suchetana

ಮಣಿಪುರ: ಮಣಿಪುರದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದದಾಸ್ ಕೊಂತೌಜಮ್ ಸೇರಿದಂತೆ ಎಂಟು ಮಂದಿ ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದು, ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್​ಗೆ ಭಾರಿ ಆಘಾತ ಎದುರಾಗಿದೆ.

ಕೊಂತೌಜಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇದರ ಬೆನ್ನಲ್ಲೇ ಎಂಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಎಲ್ಲರೂ ಇಂದು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.

2022 ರಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಅಂಗಳದಲ್ಲಿ ಚುನಾವಣಾ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಈ ರೀತಿ ಪಕ್ಷಾಂತರ ಮಾಡುತ್ತಿರುವ ಕಾರಣ, ಕಾಂಗ್ರೆಸ್​ ವಲಯದಲ್ಲಿ ಭಾರಿ ಆತಂಕ ಎದುರಾಗಿದೆ.

ಅದೇ ಇನ್ನೊಂದೆಡೆ, ಉಳಿದ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನ ರಾಷ್ಟ್ರೀಯ ಕಾಂಗ್ರೆಸ್ ಮಾಡುತ್ತಿದೆ. ಇದಾಗಲೇ ಗೋವಿಂದಾಸ್ ಕೊಂಥೌಜಮ್ ಹಾಗೂ ಅವರ ಬೆಂಬಲಿಗರಾದ ಎಂಟು ಮಂದಿ ಪ್ರಮುಖ ಶಾಸಕರ ಜತೆಗೆ ಚರ್ಚೆ ನಡೆದಿದ್ದರೂ ಕಾಂಗ್ರೆಸ್​ನ ಕೆಲವೊಂದು ನೀತಿಯಿಂದ ಬೇಸತ್ತು ಬಿಜೆಪಿ ಸೇರುವುದಾಗಿ ಅವರು ಹೇಳಿದ್ದಾರೆ.