ನ್ಯೂಸ್

VIDEO: ಅಮೆರಿಕ ಹಿಂಸಾಚಾರದ ವೇಳೆ ಟ್ರಂಪ್​ ಪುತ್ರ- ಪ್ರೇಯಸಿ ಏನು ಮಾಡುತ್ತಿದ್ದರು ನೋಡಿ...

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಅಮೆರಿಕದ ಸಂಸತ್ತನ್ನು ಧ್ವಂಸಗೊಳಿಸಿ ಹಲ್ಲೆ ನಡೆಸುತ್ತಿರುವಾಗ ಟ್ರಂಪ್ ಅವರ ಇಡೀ ಕುಟುಂಬ ಟಿವಿಯಲ್ಲಿ ಈ ಪ್ರಕರಣದ ನೇರಪ್ರಸಾರ ವೀಕ್ಷಣೆ ಮಾಡುತ್ತಿತ್ತು.

ಇದರ ವಿಡಿಯೋ ಇದೀಗ ಭಾರಿ ಸುದ್ದಿಯಾಗಿದೆ. ಧ್ವಂಸ ಪ್ರಕರಣವನ್ನು ಖುಷಿಯಿಂದ ಹಂಚಿಕೊಂಡವರಂತೆ ಟ್ರಂಪ್​ ಅವರ ಮಗನೇ ಈ ವಿಡಿಯೋ ವೈರಲ್​ ಮಾಡಿದ್ದಾನೆ! ಟ್ರಂಪ್​ ಕುಟುಂಬ ಟಿ.ವಿಯಲ್ಲಿ ಧ್ವಂಸ ಪ್ರಕರಣವನ್ನು ವೀಕ್ಷಣೆ ಮಾಡುತ್ತಿರುವುದನ್ನು ರೆಕಾರ್ಡ್​ ಮಾಡಿಕೊಂಡಿರುವ ಅವರ ಪುತ್ರ, ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಇದೀಗ ಭಾರಿ ವಿವಾದ ಹುಟ್ಟುಹಾಕಿದೆ.

ಇದಕ್ಕೆ ಕಾರಣ, ಇದರ ವಿಡಿಯೋ ಮಾಡಿರುವ ಡೊನಾಲ್ಡ್​ ಟ್ರಂಪ್ ಜೂನಿಯರ್, ಆತನ ಸ್ನೇಹಿತೆ ಕಿಂಬರ್ಲಿ ಮತ್ತು ಟ್ರಂಪ್ ಅವರ ಮುಖ್ಯಸ್ಥ ಮಾರ್ಕ್ ಮೆಡೋಸ್ ಹಿಂಸಾಚಾರವನ್ನು ನೋಡಿ ವಿಡಿಯೋಗೆ ಪೋಸ್​ ಕೊಟ್ಟು ಕುಣಿದು ಕುಪ್ಪಳಿಸಿದ್ದಾರೆ.

ಡೊನಾಲ್ಡ್​ ಟ್ರಂಪ್ ಮತ್ತು ಅವರ ಮಗಳು ಇವಾಂಕಾ ಟಿ.ವಿ ಪರದೆಗಳಲ್ಲಿ ಯುಎಸ್ ಕ್ಯಾಪಿಟಲ್‌ನಲ್ಲಿ ಹಿಂಸಾಚಾರವನ್ನು ವೀಕ್ಷಿಸುತ್ತಿದ್ದಾರೆ. ಹಿನ್ನೆಲೆಯಲ್ಲಿ ವೇಗದ ಸಂಗೀತ ನುಡಿಸುವಿಕೆಯೂ ಇದೆ. ಟ್ರಂಪ್ ಮತ್ತು ಇವಾಂಕಾ ಈ ವಿಷಯದಲ್ಲಿ ಗಂಭೀರವಾಗಿ ನೋಡುತ್ತಿದ್ದರೆ, ಅವರ ಮಗ ಡೊನಾಲ್ಡ್​ ಟ್ರಂಪ್ ಜೂನಿಯರ್, ಅವರ ಗೆಳತಿ ಕಿಂಬರ್ಲಿ ಮತ್ತು ಟ್ರಂಪ್ ಅವರ ಮುಖ್ಯಸ್ಥ ಮಾರ್ಕ್ ಮೆಡೋಸ್ ಸಂತೋಷದಿಂದ ಕುಣಿದಾಡಿದ್ದಾರೆ.

ಗುರುವಾರ, ಯುಎಸ್ ಸಂಸತ್ತಿನ ಒಳಗೆ ಮತ್ತು ಹೊರಗೆ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ಇವರಲ್ಲಿ ಪೊಲೀಸ್ ಅಧಿಕಾರಿ ಮತ್ತು ಮಹಿಳೆ ಸೇರಿದ್ದಾರೆ. ಪೊಲೀಸ್ ಅಧಿಕಾರಿ ಶುಕ್ರವಾರ ನಿಧನರಾದರು.

ಟ್ರಂಪ್ ಕುಟುಂಬದ ಈ ವಿಡಿಯೋವನ್ನು ಆಸ್ಟ್ರೇಲಿಯಾದ ವೆಬ್‌ಸೈಟ್ ನ್ಯೂಸ್ ಡಾಟ್​ ಕಾಮ್ ಬಿಡುಗಡೆ ಮಾಡಿದೆ. ಟ್ರಂಪ್ ಕುಟುಂಬದ ಹೊರತಾಗಿ, ಕೆಲವರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಗೆಳತಿ ಕಿಂಬರ್ಲಿ ಕೆಲವು ಘೋಷಣೆಗಳನ್ನೂ ಕೂಗಿದ್ದಾರೆ.

ಈ ವಿಡಿಯೋದಲ್ಲಿದೆ ನೋಡಿ ಹಕೀಕತ್ತು: ಕೃಪೆ ದೈನಿಕ್​ ಭಾಸ್ಕರ್​