ನ್ಯೂಸ್

VIDEO: ಏಕಾಏಕಿ ಕೈಕೊಟ್ಟ ವಿದ್ಯುತ್​- ರೋಗಿಗಳ ಚಿಕಿತ್ಸೆಗೆ ಮೊಬೈಲ್​ ಟಾರ್ಚರ್​! ವಿಡಿಯೋ ವೈರಲ್​

ಬಾಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಲವೆಡೆ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ವಿದ್ಯುತ್​ ವ್ಯತ್ಯಯವಾದ ಹಿನ್ನೆಲೆಯಲ್ಲಿ ಬಾಲಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮೊಬೈಲ್ ಲೈಟ್ ಮೊರೆ ಹೋದ ಘಟನೆ ನಡೆದಿದೆ.

ಶನಿವಾರ ರಾತ್ರಿ ಏಕಾಏಕಿ ವಿದ್ಯುತ್ ಕಡಿತಗೊಂಡ ಹಿನ್ನೆಲೆಯಲ್ಲಿ ರೋಗಿಗಳು, ವೈದ್ಯರು ಪರದಾಡಬೇಕಾಯಿತು. ಬೇರೆ ದಾರಿ ಇಲ್ಲದೇ ವೈದ್ಯರು ರೋಗಿಗಳನ್ನು ತಪಾಸಣೆ ನಡೆಸಲು ಮೊಬೈಲ್ ಲೈಟ್ ಮೊರೆ ಹೋದರು.

ಆಸ್ಪತ್ರೆಯಲ್ಲಿ ಜನರೇಟರ್​ ಇದ್ದರೂ ಅದು ಪದೇ ಪದೇ ಕಳುವಾಗುತ್ತದೆ ಎನ್ನುವ ಕಾರಣಕ್ಕೆ ಬ್ಯಾಟರಿಗಳನ್ನು ತೆಗೆದು ಇಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಬ್ಯಾಟರಿ ಅಳವಡಿಸಲು ಕನಿಷ್ಠ 15-20 ನಿಮಿಷ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ರೋಗಿಯ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ವೈದ್ಯರು ಮೊಬೈಲ್​ ಟಾರ್ಚ್​ ಮೊರೆ ಹೋಗಿದ್ದಾರೆ.

ಮಹಿಳೆಯೊಬ್ಬರನ್ನು ಮಲಗಿಸಿ ವೈದ್ಯರು ತಪಾಸಣೆ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಕುರಿತು ಜಿಲ್ಲಾ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಪ್ರಭಾರ ಮುಖ್ಯಾಧಿಕಾರಿ ಡಾ.ಆರ್.ಡಿ.ರಾಮ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಜನರೇಟರ್​ ಇದ್ದರೂ ಅದನ್ನು ಕೂಡಲೇ ಅಳವಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದನ್ನು ಅಳವಡಿಸುವ ವೇಳೆ ಮೊಬೈಲ್​ ಟಾರ್ಚ್​ ಮೊರೆ ಹೋಗಿದ್ದೇವೆ ಎಂದಿದ್ದಾರೆ. ಆದರೆ ಸದಾ ಚರ್ಚೆಯಲ್ಲಿ ಇರುವ ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ಘಟನೆ ನಡೆದಿರುವ ಕಾರಣ, ಬಿಜೆಪಿ ವಿರೋಧಿಗಳು ಸಿಎಂ ಯೋಗಿ ಆದಿತ್ಯನಾಥ ಅವರ ಸರ್ಕಾರವನ್ನು ಟೀಕಿಸಲು ಅಸ್ತ್ರವಾಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ: (ಕೃಪೆ ಬಲ್ಲಿಯಾ ನ್ಯೂಸ್​)