ನ್ಯೂಸ್

ನನ್ನ ಮುದ್ದಿನ ಮೊಮ್ಮಗಳು ಎಂದ ಅಜ್ಜನ ಖಾತೆಗೇ ಲವರ್​ ಜತೆ ಸೇರಿ ಕನ್ನ ಹಾಕಿದ ಕಳ್ಳಿ!

ರಾಂಚಿ: ಮಕ್ಕಳೆಂದರೆ ಅಪ್ಪ ಅಮ್ಮನಿಗಿಂತಲೂ ಹೆಚ್ಚಾಗಿ ಅಜ್ಜ ಅಜ್ಜಿಯಂದಿರಿಗೇ ಪ್ರೀತಿ. ಆದರೆ ಇಲ್ಲೊಬ್ಬ ಮೊಮ್ಮಗಳು ತನ್ನ ಪ್ರಿಯಕರನ ಜತೆ ಸೇರಿ ಕನ್ನ ಹಾಕಿದ ಮೊಮ್ಮಗಳೊಬ್ಬಳು ಇದೀಗ ಅರೆಸ್ಟ್​ ಆಗಿದ್ದಾಳೆ.

ಇದು ನಡೆದಿರುವುದು ಜಾರ್ಖಂಡ್ ರಾಜ್ಯದ ಧನ್‍ಬಾದ್ ಎಂಬಲ್ಲಿ. ಪ್ರಿಯಕರನ ಜತೆಗೂಡಿ ಅಜ್ಜ ಧನ್‍ಬಾದ್ ಜಿಲ್ಲೆಯ ಭೂಲಿ ನಿವಾಸಿ ರಾಕೇಶ್ ಕುಮಾರ್ ಅವರ 11.80 ಲಕ್ಷ ರೂಪಾಯಿ ಹಣ ಲಪಟಾಯಿಸಿದ್ದಾಳೆ ಈ ಮೊಮ್ಮಗಳು.

ತಮ್ಮ ಹಣ ಕಳುವಾಗಿದೆ ಎಂದು ರಾಕೇಶ್ ಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಕ್ರಮವಾಗಿ 11 ಲಕ್ಷ 80 ಸಾವಿರ ರೂಪಾಯಿ ವರ್ಗವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದರ ಬೆನ್ನತ್ತಿ ಹೋದಾಗ ಇವೆಲ್ಲಾವೂ ಮೊಮ್ಮಗಳ ಕೃತ್ಯ ಎಂದು ಪೊಲೀಸರಿಗೆ ತಿಳಿದಿದೆ.

ಯುವತಿ ಬಿಸಿಸಿಎಲ್ ಸಹಾಯದಿಂದ ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಹಣವನ್ನು ಕದ್ದು ಪ್ರಿಯಕರನ ಜತೆಗೂಡಿ ಈ ಮೊಮ್ಮಗಳು ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದ್ದಳು. ಕೊನೆಗೂ ಅವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲ್ಕತ್ತಾದಲ್ಲಿ ಇಬ್ಬರನ್ನೂ ಬಂಧಿಸಿ ಧನ್‍ಬಾದ್​ಗೆ ಕರೆ ತಂದಿದ್ದಾರೆ.

11.80 ಲಕ್ಷ ರೂಪಾಯಿಗಳಲ್ಲಿ ಈಗ 8.25 ಲಕ್ಷ ರೂಪಾಯಿ ಮಾತ್ರವಿದ್ದು, ಉಳಿದವುಗಳನ್ನು ಖರ್ಚು ಮಾಡಿದ್ದಾರೆ ಎಂದಿರುವ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.