ನ್ಯೂಸ್

ಪಿವಿಸಿ ಪೈಪ್​ ಎಂದು ಬಾಕ್ಸ್​​​ ತೆರೆದರೆ ಸಿಕ್ಕಿದ್ದು 21 ಲಕ್ಷ ನವಿಲುಗರಿ! ಚೀನಾದೊಂದಿಗೆ ಐದೂವರೆ ಕೋಟಿ ರೂ ವ್ಯವಹಾರ!

suchetana

ನವದೆಹಲಿ: ಔಷಧಿಯ ಉದ್ದೇಶಕ್ಕಾಗಿ ನವಿಲುಗಳನ್ನು ಅವ್ಯಾಹತವಾಗಿ ಹತ್ಯೆ ಮಾಡಲಾಗುತ್ತಿದೆ. ಇವುಗಳನ್ನು ಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದ್ದರೂ, ಪೊಲೀಸರ ಕಣ್ಣುತಪ್ಪಿಸಿ ಈ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಲೇ ಇದೆ.

ಅದೇ ರೀತಿಯ ಒಂದು ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಚೀನಾಗೆ ಅಕ್ರಮವಾಗಿ ಸುಮಾರು 21 ಲಕ್ಷ ನವಿಲು ಗರಿಗಳನ್ನು ಸಾಗಿಸುತ್ತಿದ್ದರು. ಇದೀಗ ಕಸ್ಟಮ್ಸ್ ಅಧಿಕಾರಿಗಳು ಇವುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಹು ಭಾರದ ಕಂಟೇನರ್​ ಅನ್ನು ಗ್ಯಾಂಗ್​ ಒಂದು ಒಯ್ಯುತ್ತಿತ್ತು. ಇದನ್ನು ನೋಡಿ ಕಸ್ಟಮ್ಸ್​ ಅಧಿಕಾರಿಗಳಿಗೆ ಸಂದೇಹ ಬಂದಿದೆ. ನಂತರ ಅವರನ್ನು ವಿಚಾರಿಸಿದಾಗ ಇದು ಪಿವಿಸಿ ಪೈಪ್​ ಎಂದು ಹೇಳಿದ್ದಾರೆ. ಪೊಲೀಸರು ಕಂಟೇನರ್​ ತೆರೆದಾಗ ಮೇಲ್ಭಾಗದಲ್ಲಿ ಪೈಪ್​ ಇತ್ತು.

ನಂತರ ಅದನ್ನು ಪರಿಶೀಲನೆ ಮಾಡಿದಾಗ ಕೆಳಭಾಗದಲ್ಲಿ ನವಿಲುಗರಿಗಳು ಇದ್ದವು. ಸುಮಾರು 2,565 ಕೆಜಿ ತೂಕದ ನವಿಲು ಗರಿ ಇದಾಗಿದ್ದವು. ಇವುಗಳನ್ನು ಆರೋಪಿಗಳು ಚೀನಾಗೆ ರಫ್ತು ಮಾಡುತ್ತಿದ್ದರು. ತನಿಖೆ ನಂತರ ಇದನ್ನು ಔಷಧಿ ಉದ್ದೇಶಕ್ಕಾಗಿ ಕಳ್ಳಸಾಗಣಿಕೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ವಶಪಡಿಸಿಕೊಂಡಿರುವ ನವಿಲು ಗರಿಗಳ ಒಟ್ಟು ಮೊತ್ತ 5.25 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.