ನ್ಯೂಸ್

ಮತ್ತೆ ಕೋಟ್ಯಧೀಶನಾದ ಮಲೈ ಮಹದೇಶ್ವರ: ಚಿನ್ನ, ಬೆಳ್ಳಿ, ಕಾಂಚಾಣ ಝಣಝಣ...ತಡರಾತ್ರಿಯವರೆಗೂ ಎಣಿಕೆ

ಚಾಮರಾಜನಗರ: ಕರೊನಾ, ಲಾಕ್‌ಡೌನ್‌ ಇತ್ಯಾದಿಗಳಿಂದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿದ್ದ ಚಾಮರಾಜನಗರದ ಪ್ರಸಿದ್ಧ ಮಲೈಮಹದೇಶ್ವರ ದೇವಸ್ಥಾನದಲ್ಲಿ ಮತ್ತೆ ಕಾಂಚಾಣದ ವೈಭವ ಮರುಕಳಿಸಿದೆ. ಮಹದೇಶ್ವರ ಪುನಃ ಕೋಟ್ಯಧಿಪತಿಯಾಗಿದ್ದಾನೆ.

ಮಲೈಮಹದೇಶ್ವರನ ಹುಂಡಿಯಲ್ಲಿ 1.67 ಕೋಟಿ ರೂ.ಸಂಗ್ರಹವಾಗಿದೆ. ಈ ನಾಣ್ಯಗಳ ರೂಪದಲ್ಲೇ 12.33 ಲಕ್ಷ ರೂ ನಗದು ಸಂಗ್ರಹವಾಗಿರುವುದು ವಿಶೇಷ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರೀ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ನಗದು ಜತೆಗೆ 55 ಗ್ರಾಂ ಚಿನ್ನ, 2ಕೆಜಿ 50 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ನಿನ್ನೆ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಮೊತ್ತದ ಬಗ್ಗೆ ವಿವರಣೆ ನೀಡಲಾಗಿದೆ.