ನ್ಯೂಸ್

ಒಳ ಉಡುಪು ಜಾಹೀರಾತಿನಲ್ಲಿ ಕ್ರಿಕೆಟ್​ ತಾರೆ ರಾಹುಲ್​: ನಟಿ ಕಸ್ತೂರಿ ಫುಲ್​ ಖುಷ್​- ಟ್ವೀಟ್​ ವೈರಲ್​

ಮುಂಬೈ: ಐಪಿಎಲ್​ನ ಹೊಸ ತಂಡವಾಗಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕನ್ನಡಿಗ ಕೆಎಲ್ ರಾಹುಲ್ ಈ ಬಾರಿ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಟಿ-20 ಸರಣಿಗೆ ನಾಯಕರಾಗಿ ಆಯ್ಕೆ ಆಗಿರುವ ರಾಹುಲ್​ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಭಾರಿ ಸುದ್ದಿಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಸುದ್ದಿ ಮಾಡುತ್ತಿರುವುದು ಬಹುಭಾಷಾ ನಟಿ ಕಸ್ತೂರಿ ಅವರು ಮಾಡಿರುವ ಕಮೆಂಟ್.

ರಾಹುಲ್ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದಕ್ಕೆ ಕಸ್ತೂರಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಕ್ರಿಕೆಟಿಗರು ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೂ ಒಳ ಉಡುಪಿನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ರಾಹುಲ್​ ಈ ಸಾಧನೆ ಮಾಡಿದ್ದಾರೆ ಎನ್ನುವುದು ಕಸ್ತೂರಿ ಅವರ ಮಾತು.

‘ಕ್ರಿಕೆಟಿಗರು ಸಾಮಾನ್ಯವಾಗಿ ಕೂಲ್ ಡ್ರಿಂಕ್ಸ್, ಚಿಪ್ಸ್, ಆನ್‌ಲೈನ್ ಗೇಮ್‌ಗಳು ಮತ್ತು ಜನಪ್ರಿಯ ಬಟ್ಟೆ ಬ್ರ್ಯಾಂಡ್‌ಗಳ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಕ್ರಿಕೆಟಿಗರು ಒಳ ಉಡುಪಿನ ಜಾಹೀರಾತು ಹಾಗೂ ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಲು ನಾಚಿಕೆಪಡುತ್ತಾರೆ. ಆದರೆ ರಾಹುಲ್ ಇದ್ಯಾವುದಕ್ಕೂ ಮುಲಾಜಿಲ್ಲದೆ ಒಳ ಉಡುಪುಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಬಾಕ್ಸರ್‌ಗಳಲ್ಲಿ ರಾಹುಲ್‌ನನ್ನು ನೋಡಿರುವುದು ತುಂಬಾ ಸಂತೋಷವಾಯಿತು. ಇದು ಪುರುಷರ ಉಡುಪುಗಳಲ್ಲಿ ಅತ್ಯುತ್ತಮವಾಗಿ ಹೊರಹೊಮ್ಮುತ್ತದೆ ಎಂದು ನಾನು ನಂಬುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.

ನ್ನಡದ ತುತ್ತಾಮುತ್ತಾ, ಜಾಣ, ಹಬ್ಬ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಕಸ್ತೂರಿ ನಾನಾ ಕಾರಣಗಳಿಂದಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಭಾಷಾ ವಿಚಾರವಾಗಿ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಟ್ವಿಟ್ ವಾರ್ ನಲ್ಲೂ ಕಸ್ತೂರಿ ಕಾಣಿಸಿಕೊಂಡಿದ್ದರು.