ನ್ಯೂಸ್

ಇನ್ನು ಹದಿನೈದೇ ದಿನ ಬಾಕಿ.. ಯಾರನ್ನಾದ್ರೂ ತಬ್ಬಿಕೊಳ್ಳಿ... ಯಾರ ಜತೆ ಬೇಕಾದ್ರೂ ಡೇಟಿಂಗ್‌ ಮಾಡಿ...

ಬ್ರಿಟನ್‌: ಕರೊನಾ ಆರ್ಭಟ ಅದರಲ್ಲಿಯೂ ಕರೊನಾದ ಎರಡನೆಯ ಅಲೆಯಂತೂ ಪ್ರತಿಯೊಬ್ಬರ ನಿದ್ದೆಗೆಡಿಸಿದೆ. ಕರೊನಾದ ಆರಂಭದ ದಿನಗಳಿಂದಲೂ ಮಾಸ್ಕ್‌ ಜತೆಗೆ ಸಾಮಾಜಿಕ ಅಂತರ ಶಬ್ದ ಕೇಳುತ್ತಲೇ ಬಂದಾಗಿದೆ. ಕರೊನಾ ಸೋಂಕಿನ ಪ್ರಸಾರವನ್ನು ತಕ್ಕಮಟ್ಟಿಗೆ ತಡೆಯುವ ಪ್ರಯತ್ನವಿದು.

ಆದರೆ ಇದೀಗ ಇನ್ನು ಹದಿನೈದೇ ದಿನಗಳಲ್ಲಿ ಸೋಂಕು ಸಂಪೂರ್ಣ ನಿರ್ಮೂಲನವಾಗಲಿದೆ, ಯಾರು ಬೇಕಾದರೂ ತಮ್ಮ ಆಪ್ತರನ್ನು ತಬ್ಬಿಕೊಳ್ಳಬಹುದು, ಯಾರ ಜತೆಯಾದರೂ ಡೇಟಿಂಗ್‌ ಹೋಗಬಹುದು, ಒಟ್ಟಿಗೇ ಇರಬಹುದು ಎಂಬ ಸಂತೋಷದ ಸುದ್ದಿಯನ್ನು ಜನತೆಗೆ ನೀಡಲಾಗಿದೆ.

ಅಷ್ಟಕ್ಕೂ ಇಂಥದ್ದೊಂದು ಸಂದೇಶ ಬಂದಿರುವುದು ಬ್ರಿಟನ್‌ನಿಂದ. ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್‌ ಈ ಘೋಷಣೆ ಮಾಡಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಮಾಡಲು ಕಾರಣ ಅಲ್ಲಿ ಇನ್ನು 15 ದಿನಗಳಲ್ಲಿ ಸಂಪೂರ್ಣ ಕರೊನಾಮುಕ್ತ ಆಗಲಿದೆಯಂತೆ.

ಕರೊನಾ ಹಾಟ್‌ಸ್ಪಾಟ್‌ ಎನಿಸಿಕೊಂಡ ಬ್ರಿಟನ್‌ನಲ್ಲಿ ಕರೊನಾ ಲಸಿಕೆ ಬಂದ ಮೇಲೆ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಸದ್ಯ ಒಂದುಸಾವಿರ ಮಂದಿಯಲ್ಲಿ ಒಬ್ಬರು ಸೋಂಕು ಪೀಡಿತರಾಗಿದ್ದಾರಂತೆ. ಇನ್ನು ಹದಿನೈದೇ ದಿನಗಳಲ್ಲಿ ಕರೊನಾ ಮುಕ್ತವಾಗಲಿದ್ದು, ಇಷ್ಟು ದಿನಗಳವರೆಗೆ ದೂರವಿದ್ದ ಆಪ್ತರೆಲ್ಲರೂ ತಬ್ಬಿಕೊಳ್ಳಬಹುದು, ಒಟ್ಟಿಗೇ ಇರಬಹುದು ಎಂದು ಪ್ರಧಾನಿ ಹೇಳಿದ್ದಾರೆ.

ಇದೇ ವೇಳೆ ಅಂತಾರಾಷ್ಟ್ರೀಯ ಪ್ರಯಾಣವು ಪುನರಾರಂಭಗೊಳ್ಳಲು ಬ್ರಿಟನ್‌ ಸಿದ್ಧವಾಗಿದೆ, ಆದರೆ ಕಡ್ಡಾಯವಾದ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.