ನ್ಯೂಸ್

ಮಗನ ಭರ್ಜರಿ ಗೆಲುವಿನ ಬೆನ್ನಲ್ಲೇ ಕೊನೆಯುಸಿರೆಳೆದ ಅಪ್ಪ- ಕೇರಳ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷ ಪಿಳ್ಳೈ ನಿಧನ

ಕೊಲ್ಲಮ್: ಕೇರಳ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷರೂ ಆಗಿದ್ದ ಮಾಜಿ ಸಚಿವ ಆರ್ ಬಾಲಕೃಷ್ಣ ಪಿಳ್ಳೈ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಕಳೆದ ಬುಧವಾರ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ಹೇಳಿವೆ.

ಕೇರಳ ಕಾಂಗ್ರೆಸ್ ನ ಸ್ಥಾಪಕ ನಾಯಕರಲ್ಲೊಬ್ಬರಾಗಿದ್ದ ಪಿಳ್ಳೈ ಪಕ್ಷದ ಮೊದಲ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸರ್ಕಾರದ ಅಬಕಾರಿ, ಸಾರಿಗೆ ಮತ್ತು ವಿದ್ಯುಚ್ಛಕ್ತಿ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಬಾಲಕೃಷ್ಣ ಪಿಳ್ಳೈ ಅವರಿಗೆ 86 ವರ್ಷ ವಯಸ್ಸಾಗಿತ್ತು. ಪಿಳ್ಳೈ ಅವರ ಮಗ ಮಾಜಿ ಸಚಿವ ಕೆ ಬಿ ಗಣೇಶ್ ಕುಮಾರ್ ನಿನ್ನೆ ಪತನಪುರಂ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.