ನ್ಯೂಸ್

ಕಾಲೇಜು ಬೋಧಕರಿಗೆ ವರ್ಕ್‌ ಫ್ರಂ ಹೋಂ: ಸರ್ಕಾರದ ಆದೇಶ

suchetana

ಬೆಂಗಳೂರು: ಈಗಾಗಲೇ ಹಲವಾರು ಶಾಲೆಗಳಲ್ಲಿ ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಶಿಕ್ಷಕರಿಗೂ ಮನೆಯಿಂದಲೇ ಪಾಠ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಹಲವು ಶಾಲೆಗಳ ಶಿಕ್ಷಕರು ಇದೀಗ ಶಾಲೆಗೆ ಬಂದು ಕಾರ್ಯ ಆರಂಭಿಸಿದ್ದಾರೆ.

ಈ ನಡುವೆಯೇ .ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅದೇನೆಂದರೆ ಕಾಲೇಜು ಭೋದಕರಿಗೆ ಇಂದಿನಿಂದ ಅಂದರೆ ನವೆಂಬರ್‌ 4ರಿಂದ ನವೆಂಬರ್‌ 11ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ತಿಳಿಸಿದೆ. ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ.

ಆದೇಶದಲ್ಲಿ ಏನಿದೆ? : 2020/21ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳ ಪ್ರಾರಂಭಕ್ಕೆ ಆಗತ್ಯವಿರುವ ಪೂರ್ವ ಸಿದ್ಧತೆಗಳಾಗಿ ಡಿಜಿಟಲ್‌ ಲರ್ನಿಂಗ್‌, ಆನ್‌ಲೈನ್‌/ ಆಫ್‌ಲೈನ್‌ ಟೀಚಿಂಗ್‌, ಸ್ಟಡಿ ಮೆಟಿರಿಯಲ್‌ ಪ್ರಿಪರೇಷನ್‌, ಮುಂತಾದವುಗಳ ಬಗ್ಗೆ ತಯಾರಿ ಮಾಡಿಕೊಳ್ಳಲು, ಇಲಾಖಾ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ/ ಎಲ್ಲಾ ವಿಶ್ವವಿದ್ಯಾಲಯಗಳ ಬೋಧಕರಿಗೆ ದಿನಾಂಕ 4.11.2020 ರಿಂದ ದಿನಾಂಕ 11.11.2020ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುಮೋದನೆ ನೀಡಿದೆ.

ಇನ್ನು ಪ್ರಾಂಶುಪಾಲರು ಸೂಚಿಸಿದ ಬೋಧಕರು ಕಾಲೇಜಗಳಲ್ಲಿನ ತುರ್ತು ಕೆಲಸಗಳನ್ನು ನಿರ್ವಹಿಸಲು ಪರೀಕ್ಷಾ ಕಾರ್ಯಗಳಿದ್ದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆಯೂ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.