ನ್ಯೂಸ್

ನಾಯಿ ಬೇಡ ಎಂದ್ರೂ ಕೇಳದೇ ಕೊಡೆ ಹಿಡಿದು ಮಳೆಯಿಂದ ರಕ್ಷಿಸಿದ ಪುಟಾಣಿ- ವಿಡಿಯೋ ವೈರಲ್‌

suchetana

ಚಿಕ್ಕಮಕ್ಕಳು ಮತ್ತು ಸಾಕುಪ್ರಾಣಿ ಅದರಲ್ಲಿಯೂ ನಾಯಿಯ ನಡುವೆ ಅವಿನಾಭಾವ ಸಂಬಂಧ. ಚಿಕ್ಕಮಕ್ಕಳು ಎಂದರೆ ಸಾಕುಪ್ರಾಣಿಗಳಿಗೆ ಎಷ್ಟು ಪ್ರೀತಿಯೋ, ಕಂದಮ್ಮಗಳಿಗೂ ಪ್ರಾಣಿಗಳೆಂದರೆ ಅಷ್ಟೇ ಅಚ್ಚುಮೆಚ್ಚು. ಅಂಥದ್ದೇ ಒಂದು ಕ್ಯೂಟ್‌ ವಿಡಿಯೋ ಇದೀಗ ವೈರಲ್‌ ಆಗಿದೆ. ಇದರಲ್ಲಿ ಬಾಲಕಿಯೊಬ್ಬಳು ಮಳೆಯಿಂದ ನಾಯಿಯನ್ನು ರಕ್ಷಿಸಲು ಕೊಡೆಯನ್ನು ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾಳೆ.

12 ಸೆಕೆಂಡುಗಳಿರುವ ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಶಾಂತ್‌ ನಂದಾ ಶೇರ್‌ ಮಾಡಿದ್ದಾರೆ. ಮಳೆಯಲ್ಲಿ ನೆನೆಯುತ್ತಿದ್ದ ನಾಯಿಗೆ ಕೊಡೆ ಹಿಡಿದು ಅದಕ್ಕೆ ಮಳೆ ತಾಗದಂತೆ ಅದು ಎಲ್ಲಿ ಹೋದರೂ ಹಿಂಬಾಲಿಸುತ್ತಾರೆ. ನಾಯಿ ತನಗೆ ಕೊಡೆ ಬೇಡ ಎನ್ನುವಂತೆ ಸೂಚನೆ ಕೊಡುತ್ತಿದ್ದರೂ ಬಾಲಕಿ ಬಿಡುತ್ತಿಲ್ಲ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ. ನೀವೂ ಈ ವಿಡಿಯೋ ನೋಡಿ ಆನಂದಿಸಿ...