ನ್ಯೂಸ್

ಅಪಘಾತ ಮಾಡಿ ಶವವನ್ನು ಕಾರಿನ ಮೇಲೆ 10 ಕಿ.ಮೀ. ಒಯ್ದು ಬೀಸಾಕಿದ ಭೂಪ- ಸಿಸಿಟಿವಿಯಲ್ಲಿ ಸೆರೆ

ಮೊಹಾಲಿ (ಪಂಜಾಬ್): ವಾಹನ ಚಲಾಯಿಸುತ್ತಿದ್ದ ವೇಳೆ ಸೈಕಲ್‌ ಸವಾರನ ಮೇಲೆ ಕಾರು ಹತ್ತಿಸಿರುವ ಚಾಲಕನೊಬ್ಬ, ಮೃತಪಟ್ಟ ಸೈಕಲ್‌ ಸವಾರನ ಶವವನ್ನು ಕಾರಿನ ಮೇಲೆಯೇ ಹಾಕಿಕೊಂಡು 10 ಕಿ.ಮೀ ಸಾಗಿರುವ ಭಯಾನಕ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ.

ನಿರ್ಮಲ್‌ ಸಿಂಗ್‌ ಎಂಬಾತ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಅಪಘಾತಕ್ಕೀಡಾಗಿದ್ದ ಸೈಕಲ್ ಸವಾರನ ಮೃತದೇಹ ಕಾರಿನ ಟಾಪ್ ಮೇಲೆ ಹೊತ್ತು 10 ಕಿ.ಮೀ ದೂರು ಪ್ರಯಾಣಿಸಿದ್ದಾನೆ. ಇದರ ವಿಡಿಯೋ ವೈರಲ್‌ ಆಗಿದ್ದು, ನಿರ್ಮಲ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಅತಿ ವೇಗದಿಂದ ಕಾರು ಚಾಲನೆ ಮಾಡುತ್ತಿದ್ದ ಸಿಂಗ್‌. ಈ ವೇಳೆ ಸೈಕಲ್‌ ಸವಾರ ಎದುರುಗಡೆಯಿಂದ ಸೈಕಲ್‌ ಮೇಲೆ ಸವಾರನೊಬ್ಬ ಬರುತ್ತಿದ್ದ. ಸಿಂಗ್‌ ಆತನ ಮೇಲೆ ಕಾರು ಹಾಯಿಸಿಬಿಟ್ಟಿದ್ದಾನೆ. ಸೈಕಲ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುಂದೆ ಯಾರಿಗೂ ತಿಳಿಯದಂತೆ ಶವವನ್ನು ಎಲ್ಲಿಯಾದರೂ ಎಸೆದು ಬರೋಣ ಎಂದುಕೊಂಡ ಸಿಂಗ್‌ ಅದನ್ನು ಕಾರಿನ ಮೇಲೆ ಹಾಕಿಕೊಂಡು ವೇಗದಲ್ಲಿ ಚಲಾಯಿಸಿದ್ದಾನೆ.

ನಂತರ ಸುಮಾರು 10 ಕಿ.ಮೀ ವರೆಗೆ ಕಾರು ಚಲಾಯಿಸಿಕೊಂಡು ಹೋಗಿ, ನಿರ್ಜನ ಪ್ರದೇಶದಲ್ಲಿ ಮೃತ ದೇಹ ಬೀಸಾಕಿ ಪರಾರಿಯಾಗಿದ್ದಾನೆ. ಆದರೆ ಈತನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಭಯಾನಕ ವಿಡಿಯೋ ನೋಡಿ: (ಕೃಪೆ The Tribune)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ