ನ್ಯೂಸ್

VIDEO: ಟ್ರ್ಯಾಕ್ಟರ್​ ಓಡಿಸಿಕೊಂಡು ತನ್ನ ಮದುವೆಗೆ ಎಂಟ್ರಿ ಕೊಟ್ಟ ಮದುಮಗಳು- ಆನಂದ್ ಮಹೀಂದ್ರಾ ಫುಲ್​ ಖುಷ್​

ಬೆತುಲ್​ (ಮಧ್ಯಪ್ರದೇಶ): ಮದುಮಗಳೊಬ್ಬಳು ಟ್ರ್ಯಾಕ್ಟರ್ ಓಡಿಸಿಕೊಂಡು ಕಲ್ಯಾಣ ಮಂಟಪಕ್ಕೆ ಬಂದು ಗಮನ ಸೆಳೆದಿರುವ ಘಟನೆ ಮಧ್ಯಪ್ರದೇಶದ ಬೆತುಲ್​ನಲ್ಲಿ ನಡೆದಿದೆ.

ಮೇ. 25ರಂದು ನಡೆದ ಮದುವೆ ಸಮಾರಂಭದಲ್ಲಿ ವಧು ಟ್ರ್ಯಾಕ್ಟರ್​ ಏರಿ ಬಂದಿದ್ದಾಳೆ. ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಜವ್ರಾ ಗ್ರಾಮದ ನಿವಾಸಿ ಭಾರತಿ ತಾಗ್ಡೆ ಹೀಗೆ ಟ್ರ್ಯಾಕ್ಟರ್​ ಏರಿ ಬಂದವರು . ಇದರ ವಿಡಿಯೋ ಭಾರಿ ವೈರಲ್​ ಆಗಿದ್ದು, ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇದನ್ನು ಮನಸಾರೆ ಕೊಂಡಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆನಂದ ಮಹೀಂದ್ರಾ, 'ವಧು ಭಾರತಿ ಡ್ರೈವಿಂಗ್ ಸ್ವರಾಜ್​​' ಎಂದು ಟ್ವೀಟ್ ಮಾಡಿದ್ದು, Brand Makes Sense... ಎಂದು ಬರೆದುಕೊಂಡಿದ್ದಾರೆ. ಮಹೀಂದ್ರಾ ಅವರು ಹೀಗೆ ಟ್ವೀಟ್​ ಮಾಡುವುದಕ್ಕೆ ಕಾರಣ, ವಧು ಓಡಿಸಿಕೊಂಡು ಬಂದಿರುವ ಟ್ರ್ಯಾಕ್ಟರ್ ಆನಂದ್ ಮಹೀಂದ್ರಾ ಕಂಪೆನಿಗೆ ಸೇರಿದ್ದು.

ಕಳೆದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಕಲ್ಯಾಣ ಮಂಟಪಕ್ಕೆ ಕುದುರೆ ಏರಿ ಬಂದು ಎಲ್ಲರ ಗಮನ ಸೆಳೆದಿದ್ದಳು. ಈ ಘಟನೆ ಕೂಡ ಮಧ್ಯಪ್ರದೇಶದ ಬೆತುಲ್​ದಲ್ಲಿ ನಡೆದಿತ್ತು.

ವಿಡಿಯೋ ಇಲ್ಲಿದೆ ನೋಡಿ: