ಸರನ್ (ಬಿಹಾರ್): ನಕಲಿ ಮದ್ಯ ಸೇವನೆ ಮಾಡಿ ಏಳು ಮಂದಿ ಮೃತಪಟ್ಟಿದ್ದು, 25ಕ್ಕೂ ಅಧಿಕ ಮಂದಿ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ. ನಾಲ್ಕು ಮಂದಿ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರೆ, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
‘ತನಿಖಾ ವರದಿಯ ಪ್ರಕಾರ ಅಸ್ವಸ್ಥರಲ್ಲಿ ಮೆಥನಾಲ್ ವಿಷ ಇರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಈ ವಿಚಾರದಲ್ಲಿ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ.
ಕಡಿಮೆ ದರದಲ್ಲಿ ಮದ್ಯ ಸಿಗುತ್ತದೆ ಎಂಬ ಕಾರಣಕ್ಕೆ ಜನ ಇದನ್ನೇ ಖರೀದಿಸಿ ಕುಡಿಯುತ್ತಿದ್ದಾರೆ. ಈ ಹಿಂದೆ ಕೂಡ ಬಿಹಾರದ ಹಲವೆಡೆ ಇಂಥದ್ದೇ ದುರ್ಘಟನೆಗಳು ನಡೆದಿವೆ. ಆದರೂ ಜನ ನಕಲಿ ಮದ್ಯ ಸೇವನೆ ಮಾಡುವುದನ್ನು ಬಿಟ್ಟಿಲ್ಲ. ಕೆಲ ದಿನಗಳಿಂದ ಇದರ ಹಾವಳಿ ಹೆಚ್ಚಾಗಿದ್ದು, ಮದ್ಯ ಸೇವನೆ ಮಾಡಿದ ಹಲವರು ಅಸ್ವಸ್ಥರಾಗಿದ್ದರು. ವಾಂತಿ ಮತ್ತು ತಲೆತಿರುಗುವಿಕೆ ಹೆಚ್ಚಾದ ಹಿನ್ನೆಲೆ ಕೆಲವರನ್ನು ಪಾಟ್ನಾದ ಪಿಎಂಸಿಎಚ್‌ಗೆ ಕಳುಹಿಸಲಾಗಿದೆ.
ಫುಲ್ವಾರಿಯಾ ಗ್ರಾಮಕ್ಕೆ ವೈದ್ಯಕೀಯ ತಂಡವನ್ನು ಕಳುಹಿಸಿ ತಪಾಸಣೆ ಮಾಡಿಸಲಾಗಿದೆ. ಇದುವರೆಗೆ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರನ್ ಜಿಲ್ಲಾಧಿಕಾರಿ ರಾಜೇಶ್ ಮೀನಾ ಹೇಳಿದ್ದಾರೆ. (ಏಜೆನ್ಸೀಸ್)