ನ್ಯೂಸ್

ಅಬ್ಬಬ್ಬಾ....! 350 ಕೆ.ಜಿ, 4.4 ಮೀಟರ್‌ ಮೊಸಳೆಯ ನೋಡಿದ್ದೀರಾ?

suchetana

ಆಸ್ಟ್ರೇಲಿಯಾ: ಚಿತ್ರದಲ್ಲಿರುವುದು ಏನೆಂದು ಒಮ್ಮೆ ನೋಡಿದರೆ ತಿಳಿಯುವುದು ಕಷ್ಟವಲ್ಲವೆ? ಬಟ್ಟೆಯಲ್ಲಿ ಸುತ್ತಿ, ಹಗ್ಗದಲ್ಲಿ ಕಟ್ಟಿ ಇಟ್ಟಿರುವ ಇದು ಮೊಸಳೆ.

ಹೌದು. ಬೃಹದಾಕಾರದಲ್ಲಿ ಕಾಣಸಿಗುತ್ತಿರುವ ಈ ದೈತ್ಯ ಮೊಸಳೆ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯ ಪ್ರವಾಸಿ ತಾಣದಲ್ಲಿ ಜನರು ನಡೆದಾಡುವ ಜಾಗದಲ್ಲಿಯೇ ಇದು ಕಾಣಿಸಿಕೊಂಡು ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಫ್ಲೊರಾ ರಿವರ್ ನೇಚರ್ ಪಾರ್ಕ್‌ನಲ್ಲಿ ಪ್ರವಾಸಿಗರು ಓಡಾಡುವ ಸ್ಥಳದಲ್ಲಿ ಇದು ಪತ್ತೆಯಾಗಿದೆ.

ಅಂದಹಾಗೆ ಇದು 4.4 ಮೀಟರ್ ಉದ್ದವಿದ್ದು, 350 ಕೆಜಿ ತೂಗುತ್ತದೆ ಎಂದು ಕ್ಯಾಥರಿನ್ ಹಿರಿಯ ವನ್ಯಜೀವಿ ರೇಂಜರ್ ಜಾನ್ ಬರ್ಕ್ ಹೇಳಿದ್ದಾರೆ.

ಫ್ಲೋರಾ ನದಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದೈತ್ಯ ಮೊಸಳೆ ಕಂಡುಬಂದಿದೆ.

ಆಸ್ಟ್ರೇಲಿಯಾದ ಉತ್ತರ ಭಾಗದ ಉಷ್ಣವಲಯದ ಪ್ರದೇಶದಲ್ಲಿ ಮೊಸಳೆ ಹೆಚ್ಚಾಗಿವೆ. ಆದರೆ ಇಲ್ಲಿಯವರೆಗೆ ಸಿಕ್ಕಿರುವ ಅತ್ಯಂತ ಭಾರದ ಮೊಸಳೆ ಇದು ಎನ್ನಲಾಗಿದೆ.

ಸದ್ಯ ಇದನ್ನು ಸೆರೆಹಿಡಿದು ಮೊಸಳೆ ಪಾರ್ಕ್‌ನಲ್ಲಿ ಸಂತಾನೋತ್ಪತ್ತಿಗಾಗಿ ಬಿಡಲಾಗಿದೆ.