More

    ಕರೊನಾದ ನಡುವೆಯೂ 22 ಸಾವಿರ ಅಡಿ ಮೇಲೇರಿ ಬಾವುಟ ಹಾರಿಸಿದ ಸಾಹಸಿಗರು

    ಶಿಮ್ಲಾ: ಕರೊನಾ ಬಿಕ್ಕಟ್ಟಿನ ಈ ದಿನಗಳಲ್ಲಿಯೂ ಸಾಹಸಿಗಳು ಯಾವುದಕ್ಕೂ ಜಗ್ಗದೇ ತಮ್ಮ ಕೆಲಸ ಮುಂದುವರೆಸಿದ್ದಾರೆ.

    ಎಲ್ಲೆಡೆ ಕರೊನಾ ಭೀತಿಯಿರುವ ನಡುವೆಯೇ ಸಮುದ್ರ ಮಟ್ಟದಿಂದ 22 ಸಾವಿರದ 222 ಅಡಿ ಎತ್ತರದಲ್ಲಿರುವ ಲಿಯೊ ಪಾರ್ಗಿಲ್ ಪರ್ವತವನ್ನು ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಪರ್ವತಾರೋಹಿಗಳು ಏರಿದ್ದಾರೆ. ಪರ್ವತದ ತುದಿಯಲ್ಲಿ ಭಾರತದ ಬಾವುಟ ಹಾರಿಸುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

    ಈ ಪರ್ವತಾರೋಹಿಗಳ ತಂಡದಲ್ಲಿ 16 ಮಂದಿ ಇದ್ದರು. ಇವರ ಪೈಕಿ 12 ಮಂದಿ ಪರ್ವತವನ್ನು ಸಪೂರ್ಣವಾಗಿ ಯಶಸ್ವಿಯಾಗಿ ಏರಿದ್ದಾರೆ.

    ಇದನ್ನೂ ಓದಿ: ಗೋವಾ ಮುಖ್ಯಮಂತ್ರಿಗೂ ಕರೊನಾ ಸೋಂಕು: ಹೋಮ್‌ ಐಸೋಲೇಷನ್‌ನಲ್ಲಿ ಸಿಎಂ

    ತಂಡದ ನಾಯಕತ್ವವನ್ನು ಉಪ ಕಮಾಂಡರ್ ಕುಲ್ದೀಪ್ ಸಿಂಗ್ ಮತ್ತು ಡೆಪ್ಯುಟಿ ಕಮಾಂಡೆಂಟ್ ಧರ್ಮೇಂದ್ರ ವಹಿಸಿದ್ದರು.ಇವರ ಜತೆ ಹೆಡ್‌ ಕಾನ್ಸ್‌ಟೆಬಲ್‌ ಪ್ರದೀಪ್ ನೆಗಿ ಎರಡನೇ ಬಾರಿ ಶಿಖರ ಏರಿದ್ದಾರೆ. ಇವರು ಈ ಹಿಂದೆ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ನ್ನು ಎರಡು ಬಾರಿ ಏರಿದ್ದರು.

    ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿಕೊಂಡು ತಂಡ ಎಲ್ಲಾ ಮುನ್ನೆಚ್ಚರಿಕೆ, ಸಿದ್ದತೆಗಳನ್ನು ಮಾಡಿಕೊಂಡು ಪರ್ವತ ಏರಿರುವುದಾಗಿ ತಂಡ ಹೇಳಿದೆ.

    ಕರೊನಾ ಭೀತಿಯಲ್ಲಿ ಸ್ಯಾನಿಟೈಸರ್‌ ಮೊರೆ ಹೋಗಿರುವಿರಾ? ಹಾಗಿದ್ದರೆ ಇದನ್ನೊಮ್ಮೆ ಓದಿಬಿಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts