ನ್ಯೂಸ್

ಮಾರ್ಚ್‌ ತಿಂಗಳಿನಲ್ಲಿ ಬ್ಯಾಂಕ್‌ ಕೆಲಸ ಇದ್ಯಾ? ಹಾಗಿದ್ರೆ ರಜೆಗಳ ಕುರಿತು ತಿಳಿದುಕೊಳ್ಳಿ..

ಬೆಂಗಳೂರು: ರಿಸರ್ವ್‌ ಬ್ಯಾಂಕ್‌ನಿಂದ ಮಾರ್ಚ್‌ ತಿಂಗಳ ಬ್ಯಾಂಕ್‌ಗಳ ರಜಾ ಪಟ್ಟಿ ಬಿಡುಗಡೆಯಾಗಿದೆ. ದೇಶಾದ್ಯಂತ ಒಟ್ಟು 11 ದಿನಗಳ ರಜೆ ಬ್ಯಾಂಕ್‌ಗಳಿಗೆ ಇರಲಿದೆ.

ಇವುಗಳು ಶನಿವಾರ, ಭಾನುವಾರಗಳನ್ನು ಒಳಗೊಂಡಿವೆ. ಐದು ದಿನಗಳು ವಿಶೇಷ ಸಂದರ್ಭಗಳ ರಜೆಯಾಗಿದ್ದರೆ, ಇನ್ನುಳಿದವು ಶನಿವಾರ, ಭಾನುವಾರದ ರಜೆಗಳು.

ಆದರೆ ಬ್ಯಾಂಕ್‌ಗಳ ರಜೆಗಳು ಎಲ್ಲಾ ರಾಜ್ಯಗಳಿಗೂ ಒಂದೇ ತೆರನಾಗಿ ಇರುವುದಿಲ್ಲ. ಅಂದರೆ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಪ್ರತಿ ಭಾನುವಾರಗಳಂದು ಬ್ಯಾಂಕ್‌ಗಳ ರಜೆ ಎಲ್ಲೆಡೆ ಮಾಮೂಲು. ಆದರೆ ಹಬ್ಬದ ವಿಷಯಕ್ಕೆ ಬಂದಾಗ ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ರಜೆಗಳು ಇರಲಿವೆ.

ಇನ್ನು, ಕರ್ನಾಟಕದ್ದು ಮಾತ್ರ ಹೇಳುವುದಾದರೆ, ಬ್ಯಾಂಕ್‌ಗೆ ಒಟ್ಟಾರೆ ರಜೆ ಈ ರೀತಿ ಇವೆ:

ಮಾರ್ಚ್​ 7: ಭಾನುವಾರ

ಮಾರ್ಚ್​ 11 (ಗುರುವಾರ): ಮಹಾಶಿವರಾತ್ರಿ

ಮಾರ್ಚ್ 13: ಎರಡನೇ ಶನಿವಾರ

ಮಾರ್ಚ್ 14: ಭಾನುವಾರ

ಮಾರ್ಚ್​ 21: ಭಾನುವಾರ

ಮಾರ್ಚ್​ 27: ನಾಲ್ಕನೇ ಶನಿವಾರ

ಮಾರ್ಚ್​ 28: ಭಾನುವಾರ

ಮಾರ್ಚ್‌ 30 (ಸೋಮವಾರ): ಹೋಳಿ

ಇದರ ಜತೆಗೆ ಕೇಂದ್ರ ಸರ್ಕಾರದ ಬ್ಯಾಂಕ್​ ಖಾಸಗೀಕರಣವನ್ನ ವಿರೋಧಿಸಿ ಅನೇಕ ಬ್ಯಾಂಕ್​ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿದ್ದು, ಹಾಗೇನಾದರೂ ಆದಲ್ಲಿ, ಇನ್ನೂ ಕೆಲವು ದಿನಗಳು ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಾರವು. ಬ್ಯಾಂಕ್​ ಒಕ್ಕೂಟಗಳು ಮಾರ್ಚ್​ 10ರಂದು ದೆಹಲಿ ಸಂಸತ್ತಿನತ್ತ ಮೆರವಣಿಗೆ ನಡೆಸಲು ಯೋಜನೆ ರೂಪಿಸಿವೆ. ಇದೊಮ್ಮೆ ನಡೆದರೆ ಅನಿರ್ದಿಷ್ಟಾವಧಿಯವರೆಗೆ ಬ್ಯಾಂಕ್‌ಗಳು ಬಂದ್‌ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.