More

    ಇಂದು ದೇಶವ್ಯಾಪಿ ಲಾರಿ ಸಂಚಾರ ಸ್ತಬ್ಧ- ಜನಸಾಮಾನ್ಯರಿಗೆ ಇಂದಿಲ್ಲ ತೊಂದರೆ, ಆದರೆ ಮುಂದೆ?

    ಬೆಂಗಳೂರು: ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶವ್ಯಾಪಿ ಲಾರಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆ ಐದು ಗಂಟೆಯಿಂದ ಶುರುವಾಗಿರುವ ಈ ಪ್ರತಿಭಟನೆ ಇಂದು ಸಂಜೆ 8 ಗಂಟೆವರೆಗೆ ಮುಂದುವರೆಯಲಿದ್ದು, ಅಲ್ಲಿಯವರೆಗೆ ಲಾರಿ ಸಂಚಾರ ಸ್ಥಗಿತಗೊಳ್ಳಲಿದೆ.

    ಈ ಕುರಿತು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಮಾಹಿತಿ ನೀಡಿದ್ದು, ಮುಷ್ಕರಕ್ಕೆ ಕರೆ ನೀಡಿರುವುದಾಗಿ ಹೇಳಿದ್ದಾರೆ. ರೈತರ ಉತ್ಪಾದನೆ ಹಾಗೂ ಗ್ರಾಹಕರಿಗೆ ತೊಂದರೆ ಆಗದಂತೆ ಮುಷ್ಕರ ನಡೆಯುತ್ತಿದೆ. ಕರ್ನಾಟಕದಲ್ಲಿ ಒಟ್ಟು 5 ಲಕ್ಷ ಲಾರಿಗಳು ರಸ್ತೆಗೆ ಇಳಿಯುವುದಿಲ್ಲ ಎಂದಿದ್ದಾರೆ.
    ಈ ಮುಷ್ಕರದಿಂದ ಇಂದು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ. ಅಗತ್ಯ ವಸ್ತು ಪೂರೈಸಲು 10 ಸಾವಿರ ವಾಹನಗಳಿಗೆ ಅನುಮತಿ ನೀಡಲಾಗಿದೆ. ಆದ್ದರಿಂದ ಎಪಿಎಂಸಿ, ಬೆಂಗಳೂರು ಕೆಆರ್‌ ಮಾರುಕಟ್ಟೆಗೆ ವಸ್ತುಗಳ ಪೂರೈಕೆ ಎಂದಿನಂತೆ ಇರಲಿದೆ.

    ಇಂದು ಯಾರಿಗೂ ತೊಂದರೆ ಆಗುವುದಿಲ್ಲ. ಆದರೆ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು 5 ನೇ ತಾರೀಖಿನವರೆಗೆ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಬೇಡಿಕೆ ಈಡೇರದೇ ಹೋದರೆ ಮಾರ್ಚ್ 15ರಿಂದ ದೇಶವ್ಯಾಪಿ ಲಾರಿ ಬಂದ್ ಮಾಡಲಾಗುತ್ತದೆ ಎಂದು ಮಾಲೀಕರು ಎಚ್ಚರಿಸಿದ್ದಾರೆ.

    ತಮ್ಮ ಬೇಡಿಕೆಗಳ ಕುರಿತು ಮಾಹಿತಿ ನೀಡಿರುವ ಷಣ್ಮುಗಪ್ಪನವರು, ಪ್ರತಿ ಲೀಟರ್ ಡಿಸೇಲ್‌ಗೆ ಮೂರು ರೂ ಸೆಸ್ ಕಡಿಮೆ ಮಾಡಬೇಕು, ಬೆಂಗಳೂರಿನ ನೈಸ್ ರಸ್ತೆಯಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡಬೇಕು, ಇನ್ಸುರೆನ್ಸ್ ಕಡಿಮೆ ಮಾಡಬೇಕು, ಮರಳು ನೀತಿ ಜಾರಿ ಶುರು ಮಾಡಬೇಕು ಎನ್ನುವುದು ತಮ್ಮ ಒತ್ತಾಯವಾಗಿದೆ ಎಂದಿದ್ದಾರೆ.

    ಆಯಾ ಜಿಲ್ಲೆಯಲ್ಲೇ ಲಾರಿಗಳು ನಿಂತಿರುತ್ತದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ ಮಾಡಲಾಗುತ್ತದೆ. ಎಂದು ಷಣ್ಮುಗಪ್ಪ ಹೇಳಿದ್ದಾರೆ.

    ಅಣ್ಣ ಬುದ್ಧಿಹೇಳಿದ ಎಂದು ತಮ್ಮನ ಆತ್ಮಹತ್ಯೆ… ಸಾವಿನ ಸುದ್ದಿ ಕೇಳಿ ಅಣ್ಣನೂ ನೇಣಿಗೆ ಶರಣು!

    VIDEO: ಶಿವಾಜಿ ಪ್ರತಿಮೆ ಅನಾವರಣಕ್ಕೆ ಪೊಲೀಸರು ತಡೆದಾಗ ಪ್ರಕೃತಿಯಿಂದಲೇ ನಡೆಯಿತು ಈ ವಿಸ್ಮಯ!

    ‘ಕಮಲ’ ಪುತ್ರ ‘ಕೈ’ ಸದಸ್ಯ- ಕೆಲವೇ ಕ್ಷಣಗಳಲ್ಲಿ ನಡೆಯಲಿದೆ ಅಧಿಕೃತ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts