More

  ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ವಿಚಿತ್ರ ಕಾಯಿಲೆ; ನೋವಿನ ದಿನಗಳನ್ನು ಕಳೆಯುತ್ತಿದ್ದೇನೆಂದು ಕಣ್ಣೀರಿಟ್ಟ ನಟಿ

  ಮುಂಬೈ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಎಂಡೊಮೆಟ್ರಿಯೊಸಿಸ್ ಎನ್ನುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಶಮಿತಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

  ಆಸ್ಪತ್ರೆಯ ಹಾಸಿಗೆಯಲ್ಲಿ ಕುಳಿತು ವಿಡಿಯೊ ಶೇರ್‌ ಮಾಡಿಕೊಂಡಿದ್ದಾರೆ. ಶಮಿತಾ ಮಾತನಾಡಿ ಮಹಿಳೆಯರೇ, ದಯವಿಟ್ಟು ಎಂಡೊಮೆಟ್ರಿಯೊಸಿಸ್ ಬಗ್ಗೆ ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ರೋಗದ ಬಗ್ಗೆ ತಿಳಿದಿಲ್ಲ ನನ್ನ ನೋವಿನ ಮೂಲ ಕಾರಣವನ್ನು ಕಂಡುಕೊಳ್ಳಲು ಸಹಾಯ ಮಾಡಿದ ನನ್ನ ವೈದ್ಯರಾದ ಗೈನಾಕ್ ಡಾ ನೀತಾ ವಾರ್ಟಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ನಾನು ಧನ್ಯವಾದ ಎಂದಿದ್ದಾರೆ.

  ಈಗ ನಾನು ಈ ರೋಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ್ದೇನೆ ನನ್ನ ಆರೋಗ್ಯ ಮತ್ತಷ್ಟು ಸುಧಾರಿಸಲು ಎದುರು ನೀಡುತ್ತಿದ್ದೇನೆ. ಈಗೀಗ ನೋವಿಲ್ಲದ ದಿನಗಳನ್ನು ಕಳೆಯುತ್ತಿದ್ದೇನೆ. ಹೀಗಾಗಿ ಎಲ್ಲಾ ಮಹಿಳೆಯರೂ ಈ ಎಂಡೊಮೆಟ್ರಿಯೊಸಿಸ್ ಬಗ್ಗೆ ಜಾಗೃತರಾಗಿ ಮತ್ತು ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.

  ಎಂಡೊಮೆಟ್ರಿಯೊಸಿಸ್ ಕಾಯಿಲೆ; ಗರ್ಭಕೋಶಕ್ಕೆ ಸಂಬಂಧಿಸಿದ್ದು, ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮಹಿಳೆಯರಿಗೆ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಹಾಗೂ ಮುಟ್ಟಿನ ಸಮಯದಲ್ಲಿ ಕಷ್ಟವಾಗುತ್ತದೆ.

  ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್‌ ಆಗುತ್ತಿದ್ದಂತೆ ಶಮಿತಾ ಅವರ ಸಹೋದ್ಯೋಗಿಗಳು ಮತ್ತು ಬಾಲಿವುಡ್‌ನ ಅನೇಕ ಗಣ್ಯರು ಬೇಗ ಗುಣಮುಖರಾಗಿ ಎಂದು ಕಮೆಂಟ್‌ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts