More

    VIDEO: ಶಿವಾಜಿ ಪ್ರತಿಮೆ ಅನಾವರಣಕ್ಕೆ ಪೊಲೀಸರು ತಡೆದಾಗ ಪ್ರಕೃತಿಯಿಂದಲೇ ನಡೆಯಿತು ಈ ವಿಸ್ಮಯ!

    ನಿಜಾಮಾಬಾದ್‌: ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಜಯಂತಿಯನ್ನು ಇತ್ತೀಚೆಗೆ ಎಲ್ಲೆಡೆ ಆಚರಿಸಲಾಯಿತು. ಶಿವಾಜಿ ಪ್ರತಿಮೆಯನ್ನು ತೆರವುಗೊಳಿಸಿರುವ ಅಹಿತಕರ ಬೆಳವಣಿಗೆ ಕರ್ನಾಟಕದಲ್ಲಿಯೂ ನಡೆದಿದೆ. ಬೆಳಗಾವಿಯಲ್ಲಿ ನಡೆದ ಈ ಘಟನೆಗೆ ಭಾರಿ ಆಕ್ರೋಶವೂ ವ್ಯಕ್ತವಾಗಿದೆ.

    ಇಂಥದ್ದೊಂದು ಕಹಿ ಘಟನೆ ನಡೆದಿರುವುದು ಕರ್ನಾಟಕದಲ್ಲಿ ಮಾತ್ರವಲ್ಲ… ಇನ್ನೂ ಕೆಲವು ಕಡೆಗಳಲ್ಲಿ ಶಿವಾಜಿ ಜಯಂತಿಯಂದು ಶಿವಾಜಿ ಮಹಾರಾಜ್‌ ಅವರ ಪ್ರತಿಮೆಗೆ ಸಂಬಂಧಿಸಿದಂತೆ ಕೆಲವೊಂದು ಅಹಿತಕರ ಘಟನೆಗಳು ನಡೆದಿವೆ.

    ಅಂಥದ್ದೇ ಒಂದು ಘಟನೆ ನಡೆದದ್ದು ತೆಲಂಗಾಣದ ನಿಜಾಮಾಬಾದ್‌ನಲ್ಲಿ. ಇದು ಶಿವಾಜಿಯ ದೊಡ್ಡ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಶಿವಾಜಿ ಮಹಾರಾಜ್‌ ಜಯಂತ್ಯುತ್ಸವದಂದು ಅದು ಅನಾವರಣಗೊಳ್ಳಬೇಕಿತ್ತು. ಆದರೆ ಈ ಪ್ರತಿಮೆಗೆ ಸಂಬಂಧಿಸಿದಂತೆ ಕೆಲವೊಂದು ವಿವಾದಗಳು ಅಲ್ಲಿ ಹುಟ್ಟಿಕೊಂಡಿದ್ದವು. ಇದೇ ಕಾರಣಕ್ಕೆ ಜಯಂತಿಯಂದು ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

    ಅಂದು ಶಿವಾಜಿ ಪ್ರತಿಮೆ ಸುತ್ತಲೂ ಪೊಲೀಸ್‌ ಕಾವಲು ಇದ್ದುದರಿಂದ ಪ್ರತಿಮೆಯ ಅನಾವರಣಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಅನೇಕ ಮಂದಿ ನೊಂದುಕೊಂಡಿದ್ದರು. ಆದರೆ ಅಲ್ಲಿ ನಡೆಯಿತೊಂದು ವಿಸ್ಮಯ. ಅದೇನೆಂದರೆ ಶಿವಾಜಿಯ ಪ್ರತಿಮೆಯ ಅನಾವರಣಕ್ಕೆಂದು ಪ್ರತಿಮೆ ಮೇಲೆ ಹೊದಿಕೆ ಹಾಕಲಾಗಿತ್ತು. ಅದನ್ನು ತೆಗೆಯುವ ಮೂಲಕ ಪ್ರತಿಮೆ ಅನಾವರಣಗೊಳಿಸಬೇಕಿತ್ತು. ಆದರೆ ಅದಕ್ಕೆ ಅನುಮತಿ ಸಿಕ್ಕಿರಲಿಲ್ಲ.

    ಇದೇ ಸಮಯದಲ್ಲಿ ಜೋರಾಗಿ ಗಾಳಿ ಬೀಸಿದ್ದು, ಪ್ರತಿಮೆ ಮೇಲೆ ಹಾಕಲಾಗಿದ್ದ ಹೊದಿಕೆ ತಾನಾಗಿಯೇ ದೂರ ಹೋಗಿ ಬಿದ್ದಿದೆ. ಈ ಮೂಲಕ ಪ್ರತಿಮೆಯನ್ನು ಪ್ರಕೃತಿಯೇ ಅನಾವರಣಗೊಳಿಸಿದಂತೆ ಕಂಡುಬಂದಿದೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಜನರಿಗೆ ಪೊಲೀಸರ ಅನುಮತಿ ಬೇಕು, ಆದರೆ ಪ್ರಕೃತಿಗೆ ಅನುಮತಿ ಬೇಕಿಲ್ಲವಲ್ಲ, ಅದಕ್ಕೆ ಯಾರ ಅಪ್ಪಣೆಯೂ ಬೇಡ, ನೋಡಿ ಹೇಗಿದೆ ಪ್ರಕೃತಿಯ ವಿಸ್ಮಯ? ಜನರಿಗೆ ಬುದ್ಧಿ ಕಲಿಸಲು ಈ ಪ್ರಕೃತಿಯೇ ಮುಂದೆ ಬಂದಿದೆ… ಹೀಗೆ ಹಲವು ಬಗೆಯ ಕಮೆಂಟ್‌ಗಳೊಂದಿಗೆ ಈ ವಿಡಿಯೋ ಭಾರಿ ಶೇರ್‌ ಆಗುತ್ತಿದೆ.

    ನೀವೂ ಈ ವಿಸ್ಮಯದ ವಿಡಿಯೋ ನೋಡಿ…

    ಕೈಯಲ್ಲಿ ಪಿಸ್ತೂಲ್‌- ಉಸಿರುಬಿಟ್ರೆ ಶೂಟ‌್ಔಟ್‌: 8 ವರ್ಷ ಕಾರುಬಾರು ನಡೆಸಿದ್ದ ಖತರ್ನಾಕ್‌ ಕಳ್ಳ ಸಿಕ್ಕಿಬಿದ್ದ

    ವಿವಿಧ ವಿಷಯಗಳಲ್ಲಿ ಡಿಪ್ಲೋಮಾ ಮಾಡಿದವರಿಗೆ ಸೋಲಾರ್ ಸಂಸ್ಥೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ

    ಕ್ರಷರ್‌ ಜಿಲೆಟಿನ್‌ ಸ್ಫೋಟ: ಪರಾರಿಯಾಗಿದ್ದ ಬಿಜೆಪಿ ಮುಖಂಡ ಸಿಕ್ಕಿಬಿದ್ದ – ಇನ್ಸ್‌ಪೆಕ್ಟರ್‌, ಎಸ್‌ಐ ಅಮಾನತು

    ತಿರುಮಲ ವೆಂಕಟೇಶನಿಗೆ ಭಕ್ತನಿಂದ ಮೂರೂವರೆ ಕೆ.ಜಿ ತೂಕದ ಚಿನ್ನದ ಶಂಖ-ಚಕ್ರ: ಇದರ ಬೆಲೆ ಊಹಿಸುವಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts