More

    ಕೈಯಲ್ಲಿ ಪಿಸ್ತೂಲ್‌- ಉಸಿರುಬಿಟ್ರೆ ಶೂಟ‌್ಔಟ್‌: 8 ವರ್ಷ ಕಾರುಬಾರು ನಡೆಸಿದ್ದ ಖತರ್ನಾಕ್‌ ಕಳ್ಳ ಸಿಕ್ಕಿಬಿದ್ದ

    ಬೆಂಗಳೂರು: ಕೈಯಲ್ಲಿ ಪಿಸ್ತೂಲ್‌ ಹಿಡಿದುಕೊಂಡೇ ಮನೆಯೊಳಕ್ಕೆ ನುಗ್ಗಿ ಎಲ್ಲರನ್ನೂ ಬೆದರಿಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್‌ ಖದೀಮ ಇದೀಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಬೆಂಗಳೂರು ಒಂದರಲ್ಲಿಯೇ 2013ರಿಂದ ಇಲ್ಲಿಯವರೆಗೂ ಹಲವಾರು ಮನೆಗಳಲ್ಲಿ ಇದೇ ರೀತಿ ನಿರಾತಂಕವಾಗಿ ಕಳ್ಳತನ ಮಾಡಿ ಪೊಲೀಸರಿಂದ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಖುರ್ಷೀದ್‌ ಖಾನ್‌ ಬಿನ್‌ ರೆಹಮಾನ್‌ (41) ಎಂಬಾತ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

    ಸಿಸಿಬಿ ಪೊಲೀಸರು ನಡೆಸಿರುವ ಕಾರ್ಯಾಚರಣೆಯಿಂದ ಈತ ಸೆರೆ ಸಿಕ್ಕಿದ್ದಾನೆ. ಉತ್ತರಪ್ರದೇಶದ ಗಾಜಿಯಾಬಾದ್‌ನ ಖರ್ಷೀದ‌, ಈ ಹಿಂದೆ ಹರಿಯಾಣದಲ್ಲಿ ಆರ್ಮ್ಸ್ ಆಕ್ಟ್ ಅಡಿ ಅರೆಸ್ಟ್ ಆಗಿದ್ದ. ಜೈಲಿನಿಂದ ಹೊರಬಂದು ಮನೆಗಳ್ಳತನಕ್ಕೆ ಇಳಿದಿದ್ದ ಈತ ಬೆಂಗಳೂರಿನ ಹಲವಾರು ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ.

    ಪ್ರತಿಸಲ ಹೋಗುವಾಗಲೂ ಮಿಸ್ ಮಾಡದೇ ಕಂಟ್ರಿಮೇಡ್ ಪಿಸ್ತೂಲ್ ತೆಗೆದುಕೊಂಡು ಹೋಗ್ತಿದ್ದ.. ಕಳ್ಳತನದ ವೇಳೆ ಮನೆಯವರ ಅಥವಾ ಬೇರೆ ಯಾರದ್ದಾದರೂ ಕೈಗೆ ಸಿಕ್ಕಿಬಿದ್ದರೆ ಶೂಟ್‌ ಮಾಡಿ ಎಸ್ಕೇಪ್ ಆಗಲು ಈ ಪಿಸ್ತೂಲ್‌ ಬಳಕೆ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕದ್ದ ಮಾಲನ್ನು ವಿರೇಂದ್ರ ಕುಮಾರ್ ಎನ್ನುವವನ ಮೂಲಕ ವಿಲೆವಾರಿ ಮಾಡುತ್ತಿದ್ದ. ಅನೇಕ ರಾಜ್ಯಗಳಿಗೆ ಬೇಕಾಗಿದ್ದ ಈ ಖದೀಮನಿಗಾಗಿ ಸಿಸಿಬಿ ಇನ್ಸ್‌ಪೆಕ್ಟರ್‌ ಹಜರೇಶ್ ಮತ್ತು ಅವರ ತಂಡ ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಕಾರ್ಯಾಚರಣೆಗೆ ಇಳಿದಿತ್ತು.

    10 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ನಂತರ ಈತ ಸಿಕ್ಕಿಬಿದ್ದಿದ್ದಾನೆ. ಈತನಿಂದ ಸಮಾರು ಒಂದು ಕೆಜಿ‌ ಚಿನ್ನಾಭರಣ‌ ಜಪ್ತಿ ಮಾಡಲಾಗಿದೆ. ಜತೆಗೆ 1 ಪಿಸ್ತೂಲ್, ಐದು ಬುಲೆಟ್ ಜಪ್ತಿ ಮಾಡಲಾಗಿದೆ. ಈತನ ವಿರುದ್ಧ ಸ್ಯ 15 ಪ್ರಕರಣಗಳು ಇರುವುದಾಗಿ ಜೀವನ್‌ಬಿಮಾ ನಗರ ಪೊಲೀಸರು ಹೇಳಿದ್ದಾರೆ.

    ಕ್ರಷರ್‌ ಜಿಲೆಟಿನ್‌ ಸ್ಫೋಟ: ಪರಾರಿಯಾಗಿದ್ದ ಬಿಜೆಪಿ ಮುಖಂಡ ಸಿಕ್ಕಿಬಿದ್ದ – ಇನ್ಸ್‌ಪೆಕ್ಟರ್‌, ಎಸ್‌ಐ ಅಮಾನತು

    ತಿರುಮಲ ವೆಂಕಟೇಶನಿಗೆ ಭಕ್ತನಿಂದ ಮೂರೂವರೆ ಕೆ.ಜಿ ತೂಕದ ಚಿನ್ನದ ಶಂಖ-ಚಕ್ರ: ಇದರ ಬೆಲೆ ಊಹಿಸುವಿರಾ?

    ಪತ್ನಿ ತಿಂಗಳಲ್ಲಿ 15-20 ದಿನ ಬೋಲ್ಟ್‌ ಹಾಕಿ ಒಬ್ಬಳೇ ಮಲಗ್ತಾಳೆ- ಜೀವನ ಸಾಕಾಗಿದೆ; ಏನ್‌ ಮಾಡ್ಲಿ ಮೇಡಂ…

    VIDEO: ಹೊಡಿಮಗ… ಹೊಡಿಮಗ… ಗ್ರಾಹಕರಿಗಾಗಿ ಚಾಟ್‌ ಅಂಗಡಿಯ ಮಾಲೀಕರ ಫಿಲ್ಮಿಸ್ಟೈಲ್‌ ಫೈಟಿಂಗ್‌

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ