ನ್ಯೂಸ್

ಹಾರುತ್ತಾ ಹಾರುತ್ತಾ ಟ್ಯಾಕ್ಸಿಯಲ್ಲೇ ಊರು ತಲುಪಬಹುದು: ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ

ಹರಿಯಾಣ: ಬೇರೆ ಊರು, ದೇಶಗಳಿಗೆ ಹೋಗಲು ವಿಮಾನ, ಹೆಲಿಕ್ಯಾಪ್ಟರ್​ಗಳನ್ನು ಕಂಡುಹಿಡಿದು ಅದೆಷ್ಟೋ ದಶಕಗಳೇ ಕಳೆದು ಹೋದವು. ಇದೀಗ ಟ್ಯಾಕ್ಸಿಯ ರೂಪದಲ್ಲಿ ಇರುವ ಚಿಕ್ಕ ವಿಮಾನದ ಮೂಲಕ ಹಾರಿ ಹಾರಿ ಪರ ಊರು ತಲುಪಬಹುದಾದ ಏರ್​ಟ್ಯಾಕ್ಸಿ ಸೇವೆಗೆ ಚಾಲನೆ ದೊರೆತಿದೆ.

ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆಯನ್ನು ಹರಿಯಾಣ ರಾಜ್ಯದಲ್ಲಿ ಆರಂಭಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಚಂಡೀಗಢ - ಹಿಸಾರ್ ನಡುವಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಸೇವೆಗೆ ಚಾಲನೆ ನೀಡಿದ್ದಾರೆ.

ಏರ್ ಟ್ಯಾಕ್ಸಿ ನಾಲ್ಕು ಸೀಟುಗಳ ವಿಮಾನವಾಗಿದೆ. ಪೈಲಟ್ ಹೊರತುಪಡಿಸಿ ಇತರ ಮೂರು ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದು. ಇದರ ಸಹಾಯದಿಂದ ಚಂಡೀಗಢದಿಂದ ಹಿಸಾರ್‌ಗೆ ಇರುವ ದೂರವನ್ನು ಕೇವಲ 45 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

‘ಕೇಂದ್ರ ಸರ್ಕಾರದ 'ಉದಯ್' ಯೋಜನೆಯಡಿ ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು. ವಿಮಾನ ಹಾರಾಟವನ್ನು ಕೈಗೆಟುಕುವಂತೆ ಮಾಡಲು ಈ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಖಟ್ಟರ್​ ಹೇಳಿದ್ದಾರೆ.

ಏರ್ ಟ್ಯಾಕ್ಸಿ ಏವಿಯೇಷನ್ ​​ಕಂಪನಿಯು ಹಿಸಾರ್‌ನಿಂದ ಚಂಡೀಗಢಕ್ಕೆ ರೂ.1,755 ಶುಲ್ಕವನ್ನು  ನಿಗದಿಪಡಿಸಲಾಗಿದೆ.

ಹಿಸಾರ್ - ಚಂಡೀಗಢ ನಡುವೆ ಪ್ರತಿದಿನ ವಿಮಾನ ಸಂಚಾರವಿರಲಿದೆ. ಚಂಡೀಗಢ - ಹಿಸಾರ್ ವಾಯು ಸೇವೆಯನ್ನು ಆರಂಭಿಸಿರುವ ಕಂಪನಿಯು ಜನವರಿ 18ರಿಂದ ಹಿಸಾರ್‌ನಿಂದ ಡೆಹ್ರಾಡೂನ್‌ಗೆ ಹಾಗೂ ಹಿಸಾರ್‌ನಿಂದ ಧರ್ಮಶಾಲಾಗೆ ಜನವರಿ 23ರಂದು ವಿಮಾನ ಸೇವೆಯನ್ನು ಆರಂಭಿಸಲಿದೆ. ಶೀಘ್ರದಲ್ಲಿ ಇದು ಬೇರೆ ರಾಜ್ಯಗಳಿಗೆ ವಿಸ್ತರಣೆಯಾಗಲಿದೆ.