ನ್ಯೂಸ್

ಪುಲ್ವಾಮಾ ಮಾದರಿಯಲ್ಲಿಯೇ ಆತ್ಮಾಹುತಿ ದಾಳಿ: ಕನಿಷ್ಠ 30 ಸಾವು

ಕಾಬೂಲ್: ಅಫ್ಘಾನಿಸ್ತಾನದ ಸೇನಾ ನೆಲೆಯ ಬಳಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 30 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಪ್ರಾಂತ್ಯದ ಗಾಜಿಯಲ್ಲಿ ಈ ಘಟನೆ ಸಂಭವಿಸಿದೆ. ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಅರಿಯನ್ ವಾಹನವನ್ನು ಈ ಘಟನೆಯಲ್ಲಿ ಸ್ಫೋಟಿಸಲಾಗಿದೆ. ಪುಲ್ವಾಮಾದಲ್ಲಿ ನಡೆದ ಭೀಕರ ಬಾಂಬ್​ಸ್ಫೋಟವನ್ನು ನೆನಪಿಸುವ ಮಾದರಿಯಲ್ಲಿಯೇ ಈ ಘಟನೆ ನಡೆದಿದೆ.

ಈ ಸ್ಫೋಟದಲ್ಲಿ ಈವರೆಗೆ 30 ಶವಗಳನ್ನು ಗುರುತಿಸಿದ್ದೇವೆ. ಇನ್ನೂ 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರೆಲ್ಲರೂ ಸರ್ಕಾರಿ ಭದ್ರತಾ ಸಿಬ್ಬಂದಿ ಎಂದು ಘಾಜಿ ಆಸ್ಪತ್ರೆಯ ನಿರ್ದೇಶಕ ಬಾಜ್ ಮುಹಮ್ಮದ್ ಹೇಮತ್ ಹೇಳಿದ್ದಾರೆ.

ಈ ಪ್ರದೇಶಗಳಲ್ಲಿ ತಾಲಿಬಾನ್ ಮತ್ತು ಸರ್ಕಾರಿ ಪಡೆಗಳ ನಡುವೆ ಆಗಾಗ್ಗೆ ದಾಳಿಗಳು ನಡೆಯುತ್ತಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅಫ್ಗಾನಿಸ್ತಾನದಲ್ಲಿ ಭದ್ರತಾಪಡೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ ಎನ್ನಲಾಗಿದೆ.

ತಾಲಿಬಾನ್ ಮತ್ತು ಆಫ್ಘಾನಿಸ್ತಾನ ಪಡೆಗಳ ನಡುವಿನ ನಿರಂತರ ಸಂಘರ್ಷದ ಹಾಟ್​ಸ್ಪಾಟ್​ ಆಗಿರುವ ಈ ಪ್ರದೇಶದಲ್ಲಿ ಆತ್ಮಾಹುತಿ ಬಾಂಬರ್ ಸಾರ್ವಜನಿಕ ರಕ್ಷಣಾ ಘಟಕವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ದಾಳಿಯ ಹೊಣೆಯನ್ನು ಈವರೆಗೂ ಯಾರೂ ಹೊತ್ತುಕೊಂಡಿಲ್ಲ‌ ಎಂದು ತಿಳಿದು ಬಂದಿದೆ. ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಸೇನಾ ಕಮಾಂಡೋಗಳು ಕೂಡ ಕಾಂಪೌಂಡ್ ಬಳಿ ಇದ್ದರು ಎನ್ನಲಾಗಿದೆ.