ನ್ಯೂಸ್

'ಚೆನ್ನಾಗ್​ ಹೇಳಿದ್ರಿ...' ಡೈಲಾಗ್​ ಖ್ಯಾತಿಯ ಹಿರಿಯ ನಟಿ ಸರ್ವಮಂಗಳ ವಿಧಿವಶ

suchetana

 1994ರಲ್ಲಿ ತೆರೆ ಕಂಡಿದ್ದ ಅನಂತ್​ ನಾಗ್​, ವಿನಯಾ ಪ್ರಸಾದ್​ ಅಭಿನಯದ 'ಯಾರಿಗೂ ಹೇಳ್ಬೇಡಿ' ಹಾಸ್ಯ ಚಿತ್ರ ಎಂದಾಕ್ಷಣ ನೆನಪಾಗುವುದು "ಚೆನ್ನಾಗ್​ ಹೇಳಿದ್ರಿ" ಡೈಲಾಗ್​. ಈ ಡೈಲಾಗ್​ ಅದೆಷ್ಟು ಜನಪ್ರಿಯವಾಗಿದೆಯೆಂದರೆ ಇಂದಿಗೂ ಹಾಸ್ಯಭರಿತ ಮಾತನಾಡುವಾಗ ಇದನ್ನು ಹೇಳುವುದುಂಟು.

ಇಂಥದ್ದೊಂದು ಅಪರೂಪದ ಡೈಲಾಗ್​ ಮೂಲಕ ಸದಾ ನೆನಪಿನಲ್ಲಿರುವ ನಟಿಯೆಂದರೆ ಸರ್ವಮಂಗಳ. ಇವರು ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.

'ಯಾರಿಗೂ ಹೇಳ್ಬೇಡಿ' ಹೊರತಾಗಿ 'ಭಂಡ ನನ್ನ ಗಂಡ', 'ಹೆಂಡ್ತಿಯರೇ ಹುಷಾರ್' ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸರ್ವಮಂಗಳಾ ಅವರಿಗೆ 68 ವರ್ಷ ವಯಸ್ಸಾಗಿತ್ತು. ರಾತ್ರಿ 8.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಟನೆ, ಸಂಭಾಷಣೆ ಹಾಗೂ ನಿರ್ದೇಶನದಿಂದ ಜನಪ್ರಿಯತೆ ಗಳಿಸಿದ್ದ ಕುಣಿಗಲ್ ನಾಗಭೂಷಣ್ ಅವರ ಪತ್ನಿ ಸರ್ವಮಂಗಳಾ. 2013ರಲ್ಲಿ ಹೃದಯಾಘಾತದಿಂದ ನಾಗಭೂಷಣ್​ ಮೃತಪಟ್ಟಿದ್ದರು.

ಸುಮ್ಮನಳ್ಳಿಯ ಚಿತಾಗಾರದಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.