ನ್ಯೂಸ್

ಪತಿಗೂ ಧೋತಿ ತೊಡಿಸಿ, ಸೀರೆಯುಟ್ಟು ನಟಿ ಪ್ರಿಯಾಂಕಾ ಲಕ್ಷ್ಮೀಪೂಜೆ: ನೆಟ್ಟಿಗರಿಂದ ಅಭಿನಂದನೆಗಳ ಮಹಾಪೂರ

ನ್ಯೂಯಾರ್ಕ್‌(ಯುಎಸ್​): ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಭಾರತದಿಂದ ಹಾಗೂ ಬಾಲಿವುಡ್‌ನಿಂದ ಸ್ವಲ್ಪ ದೂರವಾಗಿರುವ ಈ ನಟಿ ಪತಿ ನಿಕ್​ ಜೋನಸ್​ ಜತೆ ಭಾರತ ತೊರೆದು ವರ್ಷಗಳೇ ಕಳೆದಿವೆ. ಆದರೂ ಭಾರತೀಯ ಸಂಪ್ರದಾಯವನ್ನು ಅಮೆರಿಕದಲ್ಲಿಯೂ ಮುಂದುವರೆಸಿದ್ದು, ಇದೀಗ ಇವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ.

ಈ ದೀಪಾವಳಿ ಹಬ್ಬದಂದು ಅವರು ಲಕ್ಷ್ಮೀ ಪೂಜೆ ನೆರವೇರಿಸಿದ್ದು, ಅದರ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಪ್ರಿಯಾಂಕಾ ಹಾಗೂ ಅವರ ಪತಿ ಸಾಂಪ್ರದಾಯಿಕವಾದ ಬಟ್ಟೆ ಧರಿಸಿ ಲಕ್ಷ್ಮೀ ಪೂಜೆ ಮಾಡುತ್ತಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ.

ಮಹಾಲಕ್ಷ್ಮೀಯ ಆಶೀರ್ವಾದ ನಮ್ಮ ಮೇಲೆ ಇರಲಿ. ಅವಳ ಕೃಪೆಯಿಂದ ಸುಖ, ಸಮೃದ್ಧಿ ನೆಲೆಸಲಿ. ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಇನ್​ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರಿಯಾಂಕಾ ಹಳದಿ ಬಣ್ಣದ ಸೀರೆ ತೊಟ್ಟಿದ್ದರೆ, ನಿಕ್​ ಕಸೂತಿಯಿಂದ ಕೂಡಿದ ಬಿಳಿ ಕುರ್ತಾ ಧರಿಸಿದ್ದಾರೆ.