ನ್ಯೂಸ್

ಮತ್ತೆ ಬ್ಯಾನ್​ ಆದ್ವು 43 ಆ್ಯಪ್​ಗಳು: ಅವುಗಳ ಪಟ್ಟಿ ಇಲ್ಲಿದೆ ನೋಡಿ...

suchetana

ನವದೆಹಲಿ: ಇದಾಗಲೇ ಕೇಂದ್ರ ಸರ್ಕಾರ 174 ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧ ಮಾಡಿವೆ. ಚೀನಾದ ಆ್ಯಪ್​ಗಳು ಇವಾಗಿದ್ದು, ಇದರಿಂದ ಭಾರತದ ಸಾರ್ವಭೌಮತೆ, ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಹಿನ್ನೆಲೆಯಲ್ಲಿ ಇವುಗಳನ್ನು ಬ್ಯಾನ್​ ಮಾಡಲಾಗಿತ್ತು.

ಇಷ್ಟು ಆ್ಯಪ್​ಗಳು ಬ್ಯಾನ್​ ಆದರೂ ಮತ್ತಿಷ್ಟು ಚೀನಿ ಆ್ಯಪ್​ಗಳು ಹೊಸ ರೂಪದಲ್ಲಿ, ಹೊಸ ಹೆಸರಿನಲ್ಲಿ ಬಿಡುಗಡೆಗೊಂಡಿವೆ. ಆದರೆ ಭಾರತದ ಭದ್ರತೆಯ ದೃಷ್ಟಿಯಿಂದ ಈ ಅಪ್ಲಿಕೇಷನ್​ನಗಳ ನಿರ್ಬಧ ಅನಿವಾರ್ಯವಾಗಿದೆ.

ಇದಕ್ಕೆ ಕಾರಣ, ಈ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳುವಾಗ ಪ್ರತಿಯೊಬ್ಬ ಬಳಕೆದಾರರ ಮಾಹಿತಿಯನ್ನು ಚೀನಿಯರು ಪಡೆಯುತ್ತಿದ್ದಾರೆ. ಈ ಮೂಲಕ ಭಾರತೀಯ ಬಳಕೆದಾರರ ಜುಟ್ಟನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳುವ ತವಕ ಚೀನಕ್ಕೆ.

ಮಾತ್ರವಲ್ಲದೇ ದೇಶದ ಆಂತರಿಕ ವಿಷಯಗಳ ಮಾಹಿತಿ ಪಡೆಯುವ ಕೆಲವು ಆ್ಯಪ್​ಗಳನ್ನು ಸದ್ದಿಲ್ಲದೇ ಚೀನಾ ಬಿಟ್ಟಿದೆ. ಇವುಗಳನ್ನು ಪಟ್ಟಿ ಮಾಡಿರುವ ಕೇಂದ್ರ ಸರ್ಕಾರ ಇದೀಗ ಮತ್ತೆ 43 ಆ್ಯಪ್​ಗಳನ್ನು ನಿಷೇಧಿಸಿದೆ.

2020ರ ಜೂನ್ 29ರಂದು 59 ಮೊಬೈಲ್ ಆ್ಯಪ್​, ಸೆಪ್ಟೆಂಬರ್ 2ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ 118 ಆ್ಯಪ್​ ಬ್ಯಾನ್​ ನಂತರ ಇದೀಗ ಮತ್ತೆ 43 ಆ್ಯಪ್​ ಬ್ಯಾನ್​ ಮಾಡಲಾಗಿದೆ.

ಇಂದು ಬ್ಯಾನ್​ ಆಗಿರುವ 43 ಆ್ಯಪ್​ಗಳ ಪಟ್ಟಿ ಇಲ್ಲಿದೆ ನೋಡಿ:

1) AliSuppliers Mobile App

2) Alibaba Workbench

3) AliExpress - Smarter Shopping, Better Living

4) Alipay Cashier

5) Lalamove India - Delivery App

6) Drive with Lalamove India

7) Snack Video

8) CamCard - Business Card Reader

9) CamCard - BCR (Western)

10) Soul- Follow the soul to find you

11) Chinese Social - Free Online Dating Video App & Chat

12) Date in Asia - Dating & Chat For Asian Singles

13) WeDate-Dating App

14) Free dating app-Singol, start your date!

15) Adore App

16) TrulyChinese - Chinese Dating App

17) TrulyAsian - Asian Dating App

18) ChinaLove: dating app for Chinese singles

19) DateMyAge: Chat, Meet, Date Mature Singles Online

20) AsianDate: find Asian singles

21) FlirtWish: chat with singles

22) Guys Only Dating: Gay Chat

23) Tubit: Live Streams

24) WeWorkChina

25) First Love Live- super hot live beauties live online

26) Rela - Lesbian Social Network

27) Cashier Wallet

28) MangoTV

29) MGTV-HunanTV official TV APP

30) WeTV - TV version

31) WeTV - Cdrama, Kdrama&More

32) WeTV Lite

33) Lucky Live-Live Video Streaming App

34) Taobao Live

35) DingTalk

36) Identity V

37) Isoland 2: Ashes of Time

38) BoxStar (Early Access)

39) Heroes Evolved

40) Happy Fish

41) Jellipop Match-Decorate your dream island!

42) Munchkin Match: magic home building

43) Conquista Online II