ನ್ಯೂಸ್

ಬಿಇಎಲ್​ನಲ್ಲಿ ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಗೆ ಆಹ್ವಾನ: ಅರ್ಜಿ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ

suchetana

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​)ನ ವಿವಿಧ ಘಟಕಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಪ್ರಾಜೆಕ್ಟ್​ ಇಂಜಿನಿಯರ್​-ಐ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೂರು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕಾರ್ಯಮತೆ ಆಧರಿಸಿ ನಾಲ್ಕು ವರ್ಷದವರೆಗೆ ಅವಧಿ ವಿಸ್ತರಿಸಲಾಗುವುದು. ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಹುದ್ದೆಯ ವಿವರ

ಪ್ರಾಜೆಕ್ಟ್​ ಇಂಜಿನಿಯರ್​-ಐ ವಿಭಾಗದಲ್ಲಿ 23 ಹುದ್ದೆಗಳಿದ್ದು, ಸಾಮಾನ್ಯ-6, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗೆ-3, ಇತರ-6, ಎಸ್ಸಿ-3 ಮತ್ತು ಎಸ್ಟಿ ಅಭ್ಯರ್ಥಿಗೆ 2 ಹುದ್ದೆ ಮೀಸಲಿರಿಸಲಾಗಿದೆ.

ಶೈಣಿಕ ಅರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಶೇ. 55 ಅಂಕದೊಂದಿಗೆ ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಿಕಲ್​/ಟೆಲಿಕಮ್ಯುನಿಕೇಷನ್ಸ್​ನಲ್ಲಿ ಇಂಜಿನಿಯರಿಂಗ್​ ಪದವಿ ಅಥವಾ ಬಿಟೆಕ್​, ಬಿಎಸ್ಸಿ ಪದವಿ ಕೇಳಲಾಗಿದೆ. ಒಂದು ವರ್ಷ ಅಪ್ರೆಂಟೀಸ್​ಶಿಪ್​ ತರಬೇತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

ವಯೋಮಿತಿ, ವೇತನ

1.7.2022ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯೋಮಿತಿ 32 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ 3ರಿಂದ 5 ವರ್ಷ ವಯೋಸಡಿಲಿಕೆ ಇದೆ. ಪ್ರಥಮ ವರ್ಷ 40,000, ದ್ವೀತಿಯ ವರ್ಷ 45,000, ತೃತೀಯ ವರ್ಷ 50,000 ಹಾಗೂ ನಾಲ್ಕನೇ ವರ್ಷ 55,000 ರೂ. ಮಾಸಿಕ ವೇತನ ನೀಡಲಾಗುವುದು. ಹೆಚ್ಚುವರಿಯಾಗಿ ವಿಮೆ ರೂಪದಲ್ಲಿ 12,000 ರೂ. ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ

ಶೈಣಿಕ ಅರ್ಹತೆ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಆಯ್ದ ನಗರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 1:5 ಅನುಪಾತದಲ್ಲಿ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳು ಕಂಪನಿ ನಿಯಮದ ಅನುಸಾರ ವೈದ್ಯಕಿಯ ಪರೀೆಗೆ ಒಳಗಾಗಬೇಕು. ಲಿಖಿತ ಪರೀೆ ಬೆಂಗಳೂರಿನಲ್ಲಿ ನಡೆಯಲಿದೆ.

ಅರ್ಜಿ ಸಲ್ಲಿಕೆ ಹೇಗೆ

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ನೀಡಲಾದ ವಿಳಾಸಕ್ಕೆ 472 ರೂ. ಅರ್ಜಿ ಶುಲ್ಕ ಪಾವತಿಸಿ ಸಲ್ಲಿಸತಕ್ಕದ್ದು. ಮೀಸಲಾತಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಮೀಸಲಾತಿ ಕೋರುವವರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 4.8.2022

ಅಧಿಸೂಚನೆಗೆ: https://bit.ly/3J7iGJk

ಮಾಹಿತಿಗೆ: http://bel-india.in