ನ್ಯೂಸ್

ಎರಡನೆಯ ಅಲೆಗೆ 126 ವೈದ್ಯರ ಸಾವು... ಲಸಿಕೆ ಪಡೆದ ಕುರಿತ ಮಾಹಿತಿಯೇ ಲಭ್ಯವಿಲ್ಲ!

ನವದೆಹಲಿ: ಕರೊನಾ ಎರಡನೆಯ ಅಲೆ ತನ್ನ ಭಯಂಕರ ರೂಪ ತೋರುವ ನಡುವೆಯೇ ಕರೊನಾ ವಾರಿಯರರ್ಸ್‌ ಆಗಿರುವ 126 ವೈದ್ಯರನ್ನು ಅದು ಬಲಿ ಪಡೆದಿದೆ.

ಮೊದಲ ಅಲೆಯಲ್ಲಿ 736 ವೈದ್ಯರು ಈ ಮಹಾಮಾರಿ ವೈರಸ್‌ಗೆ ಮೃತಪಟ್ಟಿದ್ದರು. ಆದರೆ ಎರಡನೆಯ ಅಲೆ ಬಂದು ಕೆಲವೇ ದಿನಗಳಲ್ಲಿ 126 ಮಂದಿ ಮೃತಪಟ್ಟಿದ್ದಾರೆ. ಈ ಕುರಿತು ಭಾರತೀಯ ವೈದ್ಯಕೀಯ ಸಂಘ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.

ಆದರೆ ಲಸಿಕೆ ಬಂದ ಮೇಲೂ ಈ ವೈದ್ಯರು ಮೃತಪಟ್ಟಿದ್ದೇಕೆ? ಇವರು ಲಸಿಕೆಯನ್ನು ಪಡೆದಿದ್ದರೆ ಇಲ್ಲವೇ, ಪಡೆದಿದ್ದರೆ ಎಷ್ಟು ಮಂದಿ ಲಸಿಕೆ ತೆಗೆದುಕೊಂಡಿದ್ದರು ಇತ್ಯಾದಿ ಯಾವ ಮಾಹಿತಿಯೂ ಸದ್ಯ ಸರ್ಕಾರದ ಬಳಿ ಲಭ್ಯವಿಲ್ಲ.

ಕೇಂದ್ರದ ಆರೋಗ್ಯ ಇಲಾಖೆ ಹಾಗೂ ರಾಜ್ಯಗಳು ಕರೊನಾ ಸೋಂಕು ತಗುಲಿ ಮೃತಪಟ್ಟ ವೈದ್ಯರ ಸಾವಿನ ಹಾಗೂ ಅವರು ಲಸಿಕೆ ಪಡೆದಿದ್ದರಾ ಎಂಬ ಮಾಹಿತಿ ಕಲೆ ಹಾಕಬೇಕು. ಆದರೆ ಸರ್ಕಾರ ಹೀಗೆ ಮಾಡಿಲ್ಲ ಎನ್ನುವುದು ನೋವಿನ ಸಂಗತಿ ಎಂದು ಡಾ. ರವಿ ವಾಂಖೇಡ್ಕರ್ ಹೇಳಿದ್ದಾರೆ. ಕೇಂದ್ರದ ಬಳಿ ಮಾಹಿತಿ ಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಆದಕೇಂದ್ರದ ಆರೋಗ್ಯ ಇಲಾಖೆ ಹಾಗೂ ರಾಜ್ಯಗಳು ಕರೊನಾ ಸೋಂಕು ತಗುಲಿ ಮೃತಪಟ್ಟ ವೈದ್ಯರ ಸಾವಿನ ಹಾಗೂ ಅವರು ಲಸಿಕೆ ಪಡೆದಿದ್ದರಾ ಎಂಬ ಮಾಹಿತಿ ಕಲೆ ಹಾಕಬೇಕು. ಆದರೆ ಸರ್ಕಾರ ಹೀಗೆ ಮಾಡಿಲ್ಲ ಎಂಬುವುದು ಬಹಳ ದುಃಖದ ವಿಚಾರ. ಹೀಗಾಗಿ ಭಾರತೀಯ ವೈದ್ಯಕೀಯ ಸಂಘ ಈ ಕಾರ್ಯಕ್ಕೆ ಮುಂದಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಜನವರಿ 16 ರಿಂದಲೇ ಲಸಿಕೆ ಅಭಿಯಾನ ಆರಂಭಿಸಿತ್ತು. ಹೆಲ್ತ್ ವರ್ಕರ್ಸ್‌ ಹಾಗೂ ಫ್ರಂಟ್‌ಲೈನ್‌ ವರ್ಕರ್ಸ್‌ಗೆ ಮೊದಲ ಆದ್ಯತೆ ನೀಡಲಾಗಿತ್ತು. ಒಟ್ಟು 16 ಕೋಟಿ ಜನರಿಗೆ ಲಸಿಕೆ ನಿಡಲಾಗಿದೆ. ಇದರಲ್ಲಿ ಶೇ. 94.7 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಡೋಸ್ ನೀಡಿದ್ದರೆ, 63.5 ಲಕ್ಷ ಆರೋಗ್ಯ ಸಿಬ್ಬಂದಿಗೆ ಎರಡನೇ ಡೋಸ್‌ ಕೂಡ ನೀಡಲಾಗಿದೆ. ಆದರೆ ಈ ವೈದ್ಯರು ಲಸಿಕೆ ಪಡೆದಿದ್ದರೋ ಇಲ್ಲವೋ ಎಂಬುದು ಇದುವರೆಗೆ ತಿಳಿದಿಲ್ಲ ಎಂದಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ ಇದಾಗಲೇ ಕೋವಿಡ್‌ ಹುತಾತ್ಮರ ನಿಧಿ ಸ್ಥಾಪಿಸಿದೆ. ಈವರೆಗೆ ಒಟ್ಟು 1.6 ಕೋಟಿ ರೂಪಾಯಿ ಮೃತ ವೈದ್ಯರ ಕುಟುಂಬಕ್ಕೆ ನೀಡಲಾಗಿದೆ.