ನ್ಯೂಸ್

83 ಮಹಿಳೆಯರನ್ನು ರೇಪ್​ ಮಾಡಿ ಕೊಂದ ಪೊಲೀಸ್​ ಅಧಿಕಾರಿ; ಭಯಾನಕ ಸತ್ಯ ಬಾಯ್ಬಿಟ್ಟು ತಪ್ಪೊಪ್ಪಿಕೊಂಡ ಪಾಪಿ

ಕೊನೆಗೂ ರಷ್ಯಾದ ಅತ್ಯಂತ ಕ್ರೂರ ಸರಣಿ ಹಂತಕ ಸಿಕ್ಕಿಬಿದ್ದಿದ್ದಾನೆ. ತಾನು ಬರೋಬ್ಬರಿ 83 ಮಹಿಳೆಯರನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ತೋಳದ ಬುದ್ಧಿಯ ಮನುಷ್ಯ ಎಂದೇ ಕುಖ್ಯಾತಿ ಪಡೆದಿದ್ದ ಈತನೀಗ ನನ್ನನ್ನು ಗಲ್ಲಿಗೇರಿಸಿ ಎಂದು ಕೇಳಿಕೊಳ್ಳುತ್ತಿದ್ದಾನೆ...!

ಇವನಿಗೆ 56 ವರ್ಷ. ಒಂದು ಕಾಲದಲ್ಲಿ ಪೊಲೀಸ್​ ಆಗಿದ್ದವನು. ಆದರೆ ಈಗ ಮೊರ್ಡೋವಿಯಾದ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಈತ 83 ಮಹಿಳೆಯರನ್ನು ಹೀನಾಯವಾಗಿ ಕೊಂದಿದ್ದಾನೆ. ಅವರಲ್ಲಿ ಬಹುತೇಕ ಮಹಿಳೆಯರನ್ನು ಕೊಲ್ಲುವುದಕ್ಕೂ ಮೊದಲು ಅವರ ಮೇಲೆ ಅತ್ಯಾಚಾರವೆಸಗಿದ್ದಾನೆ.

1990ರ ಸಮಯದಲ್ಲಿ ತಾನು ಮಾಡಿದ್ದ ಎರಡು ಕೊಲೆಗಳ ಬಗ್ಗೆ ಇತ್ತೀಚೆಗಷ್ಟೇ ಒಪ್ಪಿಕೊಂಡಿರುವ ಸರಣಿ ಹಂತಕ, ಇದೇ ಮೊದಲ ಬಾರಿಗೆ ನಾನು ಮಾಡಿದ ಕೃತ್ಯದ ಬಗ್ಗೆ ನನಗೆ ವಿಷಾದವಾಗುತ್ತಿರುವುದಾಗಿ ಹೇಳಿದ್ದಾನೆ.

ಈತ ತಾನು 83 ಮಹಿಳೆಯರ ಹತ್ಯೆ ಮಾಡಿದ್ದಾಗಿ ಹೇಳುತ್ತಿದ್ದರೂ ಪ್ರಕರಣಗಳ ತನಿಖೆ ನಡೆಸಿದ್ದ ಹಿರಿಯ ತನಿಖಾಧಿಕಾರಿ, ಇವನು ಕೇವಲ 83 ಮಹಿಳೆಯರನ್ನಲ್ಲ, ಸುಮಾರು 200 ಸ್ತ್ರೀಯರನ್ನು ಕೊಲೆ ಮಾಡಿದ್ದಾನೆ ಎನ್ನಿಸುತ್ತದೆ ಎಂದಿದ್ದಾರೆ. ಪ್ರಕರಣದ ವಿಚಾರಣೆ ಕೋರ್ಟ್​​ನಲ್ಲಿ ನಡೆಯುತ್ತಿರುವಾಗ, ಇವನಿಂದಲೇ ಹತ್ಯೆಯಾದ ಯುವತಿಯ ತಂದೆಯೊಬ್ಬರು, ಆರೋಪಿಗೆ ಮರಣದಂಡನೆ ವಿಧಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪತ್ನಿಗೆ ಬೆಳಗ್ಗೆ ತಲಾಕ್​ ಕೊಟ್ಟು ಸಂಜೆ ಕತ್ತು ಕೊಯ್ದು ಕೊಲೆ ಮಾಡಿದ ವ್ಯಕ್ತಿಯ ಉದ್ದೇಶವೇನಿತ್ತು?

ಈತನ ಹೆಸರು ಪೋಪ್​ಕೊವ್​. ಪೊಲೀಸ್ ಆಗಿದ್ದಾಗಲೇ ಮಹಿಳೆಯರನ್ನು ಹತ್ಯೆ ಮಾಡಿದ ಮಹಾಪಾಪಿ ಇವನು. ಯಾವುದಾದರೂ ಯುವತಿ, ಮಹಿಳೆಯರು ರಾತ್ರಿ ಹೊತ್ತು ಏಕಾಂಗಿಯಾಗಿ ರಸ್ತೆ ಮೇಲೆ ಹೋಗುತ್ತಿರುವುದನ್ನು ನೋಡಿದರೆ ಸಾಕು, ತನ್ನ ಪೊಲೀಸ್​ ಕಾರನ್ನು ಅವರ ಬಳಿ ನಿಲ್ಲಿಸಿ ವಿಚಾರಿಸುತ್ತಿದ್ದ. ತನಗೆ ಭಯಂಕರ ಕಾಳಜಿ ಇರುವಂತೆ ಅವರಿಗೆ ಲಿಫ್ಟ್​ ಕೊಡುವುದಾಗಿ ಕರೆಯುತ್ತಿದ್ದ. ಅವನೂ ಪೊಲೀಸ್​ ಆಗಿದ್ದರಿಂದ ಮಹಿಳೆಯರು ನಂಬಿ ಹತ್ತುತ್ತಿದ್ದರು. ಈತ ಅಂಗಾರ್​ಸ್ಕ್​ ಎಂಬ ನಗರದಲ್ಲಿ ವಾಸವಾಗಿದ್ದ. ಅದೇ ನಗರದ ಹೆಣ್ಣುಮಕ್ಕಳನ್ನೇ ಜಾಸ್ತಿ ಟಾರ್ಗೆಟ್ ಮಾಡುತ್ತಿದ್ದ. ಹಾಗೇ ವಿಚಾರಣೆ ವೇಳೆ, ನಾನು ಪ್ರತಿ ಹತ್ಯೆಯ ವಿವರಣೆಯನ್ನೂ ಕೊಡಲಾರೆ. ಆದರೆ ಬಹುತೇಕ ಎಲ್ಲವೂ ಒಂದೇ ರೀತಿಯಾಗಿಯೇ ಇರುತ್ತಿತ್ತು. ನಾನು ಮದ್ಯಪಾನ ಮಾಡಿಯೇ, ರೇಪ್​ ಮಾಡಿ, ಕೊಲ್ಲುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. 83 ಹತ್ಯೆಯ ಬಳಿಕ ನನಗೆ ಭಯವಾಗಲು ಶುರುವಾಯಿತು. ಸಿಕ್ಕಿಬಿದ್ದರೆ ಗತಿಯೇನು ಎನ್ನಿಸಿತು. ಹಾಗಾಗಿ ಅದನ್ನಲ್ಲಿಗೇ ನಿಲ್ಲಿಸಿದೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಮತ್ತಷ್ಟು ರೆಮ್ಡೆಸಿವಿರ್ ಕಾಳದಂಧೆಕೋರರ ಬಂಧನ.. ಬೆಚ್ಚಿಬೀಳಿಸುವಂತಿದೆ ಮೋಸದ ಜಾಲ..!

ನನ್ನ ಮಾತು ನಂಬಿ ಕಾರು ಹತ್ತಿ ಬರುತ್ತಿದ್ದ ಮಹಿಳೆಯರನ್ನು ನನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದೆ. ಆಗ ಜಗಳವಾಗುತ್ತಿತ್ತು. ತಪ್ಪಿಸಿಕೊಂಡು ಓಡಲು ಯತ್ನಿಸುತ್ತಿದ್ದರು ಎಂದೂ ಹೇಳಿದ್ದಾನೆ. ಬಹುತೇಕರನ್ನು ಅತ್ಯಾಚಾರ ಮಾಡಿ ಕೊಂದಿದ್ದೇನೆ. ತಪ್ಪಿಸಿಕೊಂಡವರನ್ನು ಹಾಗೇ ಶೂಟ್​ ಮಾಡಿದ್ದೇನೆ ಎಂದೂ ಹೇಳಿದ್ದಾನೆ.

ಈತ ಹತ್ಯೆ ಮಾಡಿದ ಓರ್ವ ಮಹಿಳೆಯ ಅಸ್ಥಿಪಂಜರವೂ ಅವನ ಮನೆಯಲ್ಲಿ ಸಿಕ್ಕಿದೆ. ಆದರೆ ತನಿಖಾಧಿಕಾರಿಗಳ ಪ್ರಕಾರ ಈತ 100ಕ್ಕೂ ಹೆಚ್ಚು ಕೊಲೆ ಮಾಡಿದ್ದಾನೆ. 200ರ ಒಳಗೆ ಇರಬಹುದು ಎಂದಿದ್ದಾರೆ. ಸದ್ಯ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೂ ಕೂಡ ಮರಣದಂಡನೆಯನ್ನೇ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾನೆ. (ಏಜೆನ್ಸೀಸ್​)