More

    ಮತ್ತಷ್ಟು ರೆಮ್ಡೆಸಿವಿರ್ ಕಾಳದಂಧೆಕೋರರ ಬಂಧನ.. ಬೆಚ್ಚಿಬೀಳಿಸುವಂತಿದೆ ಮೋಸದ ಜಾಲ..!

    ನವದೆಹಲಿ:ಕರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ರೋಗ ಗುಣಪಡಿಸುತ್ತದೆ ಎನ್ನಲಾಗುವ ಔಷಧಿಗಳ ಕಾಳ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ.
    ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಪ್ರಾಯೋಗಿಕ ಔಷಧಿಯಾದ ರೆಮ್‌ಡೆಸಿವಿರ್‌ನ ಕಾಳದಂಧೆಯಲ್ಲಿ ತೊಡಗಿದ್ದ ಆಗ್ರಾ ಮತ್ತು ಜೈಪುರದ ಇಬ್ಬರು ಸಗಟು ವ್ಯಾಪಾರಿಗಳನ್ನು ಗುರುಗ್ರಾಮ್ ಪೊಲೀಸ್ ಎಸ್‌ಐಟಿ (ವಿಶೇಷ ತನಿಖಾ ತಂಡ) ಬಂಧಿಸಿದೆ.
    ಗುರುಗ್ರಾಮ, ದೆಹಲಿ ಮತ್ತು ಉತ್ತರ ಪ್ರದೇಶದ ಆಗ್ರಾದ ಐದು ಔಷಧ ಅಂಗಡಿಗಳಲ್ಲಿ ವಿಚಾರಣೆ ನಡೆಸಿದ ಬೆನ್ನಲ್ಲೇ ಬುಧವಾರ ಮತ್ತು ಗುರುವಾರ ಇವರೀರ್ವರನ್ನು ಬಂಧಿಸಲಾಗಿದೆ. ಕಳೆದ ಒಂದು ವಾರದಲ್ಲಿ ಐವರು ಔಷಧದ ಅಂಗಡಿಕಾರರು ಮತ್ತು ನಾಲ್ಕು ಇರಾಕಿ ಪ್ರಜೆಗಳು ಸೇರಿ ಒಟ್ಟು 11 ಜನರನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಉಜ್ಜಯಿನಿ ಮಹಾಕಾಳ ದೇವಸ್ಥಾನ ಉಗ್ರರ ಕೇಂದ್ರಸ್ಥಾನ ಎಂದ ಬಿಎಸ್​ಪಿ ಕೌನ್ಸಿಲರ್​ ಬಂಧನ

    ಗುರುಗ್ರಾಮದ ಸರ್ದಾರ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಔಷಧ ನಿಯಂತ್ರಣಾ ಇಲಾಖೆ ನಡೆಸಿದ ದಾಳಿಯಲ್ಲಿ ನಾಲ್ವರು ಇರಾಕ್ ಪ್ರಜೆಗಳನ್ನು ಜುಲೈ 29 ರಂದು ಗುರುಗ್ರಾಮದಲ್ಲಿ ಬಂಧಿಸಲಾಯಿತು.
    ಅವ್ಸ್ ರಾಡ್ ನೀಲ್ಮಾ ಅಲ್-ಹೆಂಡಿ, ಅಕ್ರಮ್ ಫೈಜ್, ಮೋಹನ್ನದ್ ಮತ್ತು ಒಥ್ಮಾನಾ ಎ ಏದ್ – ಬಂಧಿತ ಇರಾಕಿಗಳು. ಅವರಿಂದ ಒಟ್ಟು 47 ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಅವರ ವಿಚಾರಣೆಯ ಸಂದರ್ಭದಲ್ಲಿ ಮತ್ತಷ್ಟು ಆರೋಪಿಗಳ ಸುಳಿವು ಸಿಕ್ಕಿತ್ತು. ಅವರು ಗುರುಗ್ರಾಮ್‌ನ ಔಷಧಿಯಂಗಡಿಯ ಪ್ರದೀಪನ ಹೆಸರನ್ನು ಬಹಿರಂಗಪಡಿಸಿದರು. ಪೊಲೀಸರು ಆತನ ಅಂಗಡಿಗೆ ದಾಳಿ ನಡೆಸಿ ಅಲ್ಲಿಂದ 84 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಆತ ಯಾವುದೇ ಸರಕುಪಟ್ಟಿ ಇಲ್ಲದೆ ಔಷಧಿಯನ್ನು ಹೊಂದಿದ್ದ.

    ಇದನ್ನೂ ಓದಿ:  ಚೀನಾದಿಂದ ಕೊನೆಗೂ ಭಾರತಕ್ಕೆ ಮರಳಲಿದ್ದಾರೆ 233 ಭಾರತೀಯರು

    ಅಲ್ಲಿಂದ ಮಾಹಿತಿ ಪಡೆದು ದೆಹಲಿಯಿಂದ ಮೂವರು ಮತ್ತು ಆಗ್ರಾದಿಂದ ಒಬ್ಬಾತನನ್ನು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಈಗ ಆಗ್ರಾ ಮತ್ತು ಜೈಪುರದಿಂದ ಇಬ್ಬರು ಸಗಟು ವ್ಯಾಪಾರಿಗಳನ್ನು ಸಹ ಬಂಧಿಸಲಾಗಿದೆ.
    ಈ ಔಷಧದ ಕಾಳದಂಧೆಯ ದೊಡ್ಡ ಜಾಲವೇ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಆಗ್ರಾ ಅಪರಾಧಿಯನ್ನು ಬಂಧಿಸಿದ ನಂತರ, ರಾಜಸ್ಥಾನದ ಜೈಪುರದಲ್ಲಿ ಈ ಜಾಲವಿರುವ ಸಂಶಯ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಸೋಮವಾರ ಗುರುಗ್ರಾಮ್ ಪೊಲೀಸ್ ಆಯುಕ್ತರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯನ್ನು ನಿಗದಿಪಡಿಸಿದ್ದಾರೆ.

    ಇದನ್ನೂ ಓದಿ: ಮನೆಯಲ್ಲೇ ಚೆಕ್‌ಬುಕ್‌ ಪ್ರಿಂಟ್‌ ಮಾಡ್ತಿದ್ದ ಭೂಪ! ‘ಕೋಟ್ಯಧಿಪತಿ’ಯ ಗೋಲ್‌ಮಾಲ್‌…

    ಔಷಧಿ ಕಾಳ ದಂಧೆ ಕಳೆದ ಕೆಲವು ವರ್ಷಗಳಿಂದ ಚಾಲನೆಯಲ್ಲಿದೆ ಎಂದು ಶಂಕಿಸಲಾಗಿದೆ. ಪೊಲೀಸ್ ಮೂಲಗಳು, ರೆಮ್ಡೆಸಿವಿರ್ ಗಿಂತಲೂ ಮೊದಲು, ಈ ಗ್ಯಾಂಗ್ ನವರು ಇತರ ಔಷಧಗಳನ್ನು ಹಲವು ದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದರು.
    ಆಸ್ಪತ್ರೆಗಳು, ಅಧಿಕೃತ ವ್ಯಾಪಾರಸ್ಥರು ಮತ್ತು ಉತ್ಪಾದನಾ ಕಂಪನಿಗಳನ್ನು ಗಮನಿಸಲಾಗುತ್ತಿದ್ದು, ಔಷಧಗಳ ನಿಖರ ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸುಷ್ಮಾ ಸ್ವರಾಜ್​ ಮೊದಲ ಪುಣ್ಯತಿಥಿಯಂದು ಗೌರವ ಸಲ್ಲಿಸಿದ ಪ್ರಧಾನಿ ಮೋದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts