ನ್ಯೂಸ್

ನನಗೆ ವರ ಬೇಕು..! ಮಾಲ್​​ನಲ್ಲಿ ಪೋಸ್ಟರ್​ ಹಿಡಿದು ಪೋಸ್ ಕೊಟ್ಟ ವಧು..

ರಷ್ಯಾ: ಯುವಕ-ಯುವತಿಯರು ಮದುವೆಗೆ ಹುಡುಗ ಅಥವಾ ಹುಡುಗಿಯನ್ನು ಬಯಸಿ ಮ್ಯಾಟ್ರಿಮೋನಿ ಪೋಸ್ಟ್ ಮಾಡುವುದು ಸಾಮಾನ್ಯ. ಯಾವ ರೀತಿಯ ವಧು-ವರರು ಬೇಕು ಎಂಬ ಮಾಹಿತಿಯನ್ನೂ ನೀಡಲಾಗುತ್ತದೆ. ಕೆಲವರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಮಾಡುತ್ತಿದ್ದಾರೆ.

ಆದರೆ ರಷ್ಯಾದ ಸುಂದರಿಯೊಬ್ಬರು 'ಲುಕಿಂಗ್ ಫಾರ್ ಇಂಡಿಯನ್ ಹಸ್ಬೆಂಡ್' ಪೋಸ್ಟರ್ ಹಿಡಿದು ಫೋಟೋ ಹಾಕಿದ್ದಾರೆ. ಮಾಸ್ಕೋದಲ್ಲಿರುವ ಮಾಲ್‌ವೊಂದರಲ್ಲಿ ಭಾರತೀಯ ವರನನ್ನು ಹುಡುಕುತ್ತಿರುವ ಕುರಿತಾಗಿ ಪೋಸ್ಟರ್​ ಹಿಡಿದು ನಿಂತಿದ್ದಾಳೆ. ಈ ಪೋಸ್ಟರ್​ನಲ್ಲಿ ಪುರುಷ ಆಕೃತಿಯ ಪಕ್ಕದಲ್ಲಿ ಯುವತಿ ನಿಂತಿದ್ದಾಳೆ.   

ರಷ್ಯಾದ ಸುಂದರಿ ದಿನಾರಾ  ಕೆಂಪು ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು. ಈ ಪೋಸ್ಟ್​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಭಾರತೀಯ ಯುವಕನನ್ನು ಮದುವೆಯಾಗಲು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದಳು. ತನಗೆ ವರನನ್ನು ಹುಡುಕಲು ಸಹಾಯ ಮಾಡುವಂತೆ ತನ್ನ  ಇನ್​ಸ್ಟಾಗ್ರಾಮ್​​ ಅನುಯಾಯಿಗಳನ್ನು ಕೇಳಿದ್ದಾಳೆ. ಈ ಪೋಸ್ಟ್​ಗೆ ತರಹೆವಾಗಿ ಕಾಮೆಂಟ್​​ ಬಂದಿದೆ.