Pahalgam Attack: ಕಾಶ್ಮೀರ ಪಹಲ್ಗಾಮ್ ದಾಳಿಯನ್ನು ಖಂಡಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಾಕಿಸ್ತಾನ ಯುದ್ಧ ಮಾತುಗಳ ಬೆನ್ನಲ್ಲೇ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ. ಪುಟಿನ್ರ ಈ ಮಾತು ಇದೀಗ ಪಾಕಿಸ್ತಾನಕ್ಕೆ ನಡುಕ ಹೆಚ್ಚಿಸಿದೆ.
ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ನಡುವೆ ರಷ್ಯಾ ಭಾರತದ ಬೆಂಬಲಕ್ಕೆ ನಿಂತಿದೆ. ಪ್ರಧಾನಿ ಮೋದಿಗೆ ಕರೆ ಮಾಡಿ ಮಾತನಾಡಿದ ರಷ್ಯಾ ಅಧ್ಯಕ್ಷ ತಾವು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ಪುಟಿನ್, ಉಗ್ರರ ಅಟ್ಟಹಾಸ ಕೊನೆಗೊಳಿಸಲು ಜತೆಯಾಗಿ ನಿಲ್ಲುವುದಾಗಿ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಚೀನಾ ಬೆಂಬಲಿಸಲು ಚಿಂತನೆ ನಡೆಸುತ್ತಿರುವ ಸಮಯದಲ್ಲೇ ವ್ಲಾಡಿಮಿರ್ ಪುಟಿನ್ ಪಾಕ್ಗೆ ಆಘಾತಕಾರಿ ಸುದ್ದಿಯನ್ನು ಮುಟ್ಟಿಸಿದ್ದಾರೆ. ರಷ್ಯಾ ನಿರ್ಮಿತ ಇಗ್ಲಾ ಎಸ್ ಕ್ಷಿಪಣಿಗಳನ್ನು ಖರೀದಿಸಲು ಭಾರತೀಯ ಸೇನೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತುರ್ತು ಸಮಯದಲ್ಲಿ ವೆಸ್ಟರ್ನ್ ಫ್ರಂಟ್ ಡಿಫೆನ್ಸ್ ಪ್ರೋಗ್ರಾಮ್ ಅಡಿಯಲ್ಲಿ ರಷ್ಯಾ ಭಾರತದೊಂದಿಗೆ 250 ಕೋಟಿ ರೂ. ಮೌಲ್ಯದ ಈ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ವಾರಕ್ಕೆ 3 ಬಾರಿ ಡಯಾಲಿಸಿಸ್! ಪುತ್ರನ ಆಟ ನೋಡಿದ್ರೆ ಮಾತ್ರ ತಂದೆ ಮೊಗದಲ್ಲಿ ಸಂತಸ | Prabhsimran Singh
ಈ ಕ್ಷಿಪಣಿಗಳನ್ನು ಸೇನೆ ಮತ್ತು ವಾಯುಪಡೆಗೆ ಸಹ ಪೂರೈಸಲಾಗಿದೆ. ಶಸ್ತ್ರಾಸ್ತ್ರಗಳನ್ನು ಕೆಲವು ದಿನಗಳ ಹಿಂದೆ ಅತಿ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಗಳ ವಿಭಾಗದಲ್ಲಿ ಸೈನ್ಯಕ್ಕೆ ತಲುಪಿಸಲಾಗಿದ್ದರೂ, ಇತ್ತೀಚೆಗೆ ರಷ್ಯಾದಿಂದ ಮತ್ತೊಂದು ಬ್ಯಾಚ್ ರಕ್ಷಣಾ ಪಡೆಗಳಿಗೆ ಬಂದಿದೆ. ಪಹಲ್ಗಾಮ್ ದಾಳಿಯ ನಂತರವೇ ರಕ್ಷಣಾ ಸಚಿವಾಲಯವು ಈ ಎರಡನೇ ಬ್ಯಾಚ್ ಶಸ್ತ್ರಾಸ್ತ್ರಗಳನ್ನು ತಂದಿತು. ಇವುಗಳ ಜೊತೆಗೆ, ಭಾರತೀಯ ಸೇನೆಯು 48 ರಾಕೆಟ್ ಲಾಂಚರ್‌ಗಳು ಮತ್ತು 90 ಶೌರಾಜ್ ಕ್ಷಿಪಣಿಗಳಿಗೆ ಟೆಂಡರ್‌ಗಳನ್ನು ಸಹ ಕರೆದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ರಷ್ಯಾ, ಭಾನುವಾರ ನಡೆದ ಆರ್ಕ್ಟಿಕ್ ವೃತ್ತದ ಸಭೆಯಲ್ಲಿ ಸಿಮ್ಲಾ ಒಪ್ಪಂದವನ್ನು ಜಾರಿಗೆ ತರುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿತು.
ಅದೇ ಸಮಯದಲ್ಲಿ, ದೇಶದ ವಿದೇಶಾಂಗ ಸಚಿವ ಜೈಶಂಕರ್ ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಆಘಾತ ನೀಡಿದ್ದಾರೆ. ಈ ಸಮಯದಲ್ಲಿ ನಮಗೆ ಪಾಲುದಾರರು ಬೇಕು, ಧರ್ಮೋಪದೇಶಕರಲ್ಲ ಎಂದು ಹೇಳಿದರು. ಯುರೋಪ್ ಸೇರಿದಂತೆ ಕೆಲವು ದೇಶಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬಗ್ಗೆ ತಗಾದೆ ತೆಗೆದಾಗ, ಜೈಶಂಕರ್ ಇದಕ್ಕೆ ಪ್ರತಿಯಾಗಿ ಹೇಳಿದರು.
ಇದನ್ನೂ ಓದಿ: ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ರಿಲೀಸ್ ಆಗಲಿರುವ ಚಿತ್ರಗಳಿವು! ಇಲ್ಲಿದೆ ನೋಡಿ ಪಟ್ಟಿ | OTT Films
"ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ಬದ್ಧತೆಯನ್ನು ಎರಡು ರಾಷ್ಟ್ರಗಳ ನಾಯಕರು ಪುನರುಚ್ಚರಿಸಿದರು. 80ನೇ ವಿಜಯ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಧ್ಯಕ್ಷ ಪುಟಿನ್ ಅವರಿಗೆ ಶುಭಾಶಯಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯುವ ವಾರ್ಷಿಕ ಶೃಂಗಸಭೆಗೆ ಪುಟಿನ್ರನ್ನು ಆಹ್ವಾನಿಸಿದರು" ಎಂದು ಜೈಸ್ವಾಲ್ ತಿಳಿಸಿದರು,(ಏಜೆನ್ಸೀಸ್).