Russia Nuke Missile: ಯುಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸದೆ ಇಂದಿಗೂ ಸಾರುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇದೀಗ ಪ್ರಮುಖ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ರಷ್ಯಾ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಇದಲ್ಲದೆ, ವಿಶ್ವದ ಯಾವುದೇ ರಕ್ಷಣಾ ವ್ಯವಸ್ಥೆಯನ್ನು ಭೇದಿಸಬಲ್ಲ ಈ ಮಿಸೈಲ್ ಶೀಘ್ರದಲ್ಲೇ ಮಿಲಿಟರಿ ನಿಯೋಜನೆಗೆ ಸಿದ್ಧವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕ್ಷಿಪಣಿಯ ಹೆಸರು 'ಬ್ಯೂರೆವೆಸ್ಟ್ನಿಕ್'. ಇದು ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯಾಗಿದೆ. ಈ ಕ್ಷಿಪಣಿ 14,000 ಕಿ.ಮೀ.ವರೆಗೆ ಚಲ್ಲಿಸಬಲ್ಲದು ಹಾಗೂ ತನ್ನ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪರಮಾಣು ಚಾಲಿತವಾಗಿದ್ದ ಈ ಕ್ಷಿಪಣಿ ಒಂದೇ ಹಾರಾಟದಲ್ಲಿ 15 ಗಂಟೆಗಳ ಕಾಲ ಹಾರಿದ್ದು, ಒಟ್ಟು 140 ಕಿ.ಮೀ ದೂರವನ್ನು ಕ್ರಮಿಸಿತು ಎಂದು ರಷ್ಯಾದ ಮಿಲಿಟರಿ ಮುಖ್ಯಸ್ಥರು ಅಧ್ಯಕ್ಷ ಪುಟಿನ್ ಅವರಿಗೆ ತಿಳಿಸಿದ್ದಾರೆ. ಕ್ಷಿಪಣಿ ಬಹುತೇಕ ಅನಿಯಮಿತ ವ್ಯಾಪ್ತಿಯನ್ನು ಹೊಂದಿದೆ ಮತ್ತು ಅದರ ಪಥವನ್ನು ಊಹಿಸಲು ಅಸಾಧ್ಯ ಎಂಬ ಅಚ್ಚರಿ ಸಂಗತಿಯನ್ನೂ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: 277 ದಲಿತ ದೌರ್ಜನ್ಯ, 14 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ – ಗಂಭೀರವಾಗಿ ಪರಿಗಣಿಸಲು ಕುಂದು ಕೊರತೆ ಸಭೆಯಲ್ಲಿ ಆಗ್ರಹ
NATO ದೇಶಗಳು 'SSC-X-9 ಸ್ಕೈಫಾಲ್' ಎಂದು ಕರೆಯುವ ಈ ಪರಮಾಣು ಕ್ಷಿಪಣಿಯ ಕುರಿತು ಪುಟಿನ್ ಪ್ರಮುಖ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ. "ಜಗತ್ತಿನಲ್ಲಿ ಬೇರೆ ಯಾರಲ್ಲೂ ಇಲ್ಲದ ವಿಶಿಷ್ಟ ಮಿಸೈಲ್ ನಮ್ಮದಾಗಿದೆ. ಯಾವುದೇ ಟಾರ್ಗೆಟ್ ಅನ್ನು ಭೇದಿಸುವ ಶಕ್ತಿಯನ್ನು ಇದು ಹೊಂದಿದೆ. ಅಂತಹ ಕ್ಷಿಪಣಿಯನ್ನು ತಯಾರಿಸುವುದು ಅಸಾಧ್ಯ ಎಂದು ನಮ್ಮ ತಜ್ಞರು ಒಮ್ಮೆ ಹೇಳಿದ್ದರು. ಈಗ ಪ್ರಮುಖ ಪರೀಕ್ಷೆಗಳು ಸಹ ಪೂರ್ಣಗೊಂಡಿವೆ" ಎಂದಿದ್ದಾರೆ,(ಏಜೆನ್ಸೀಸ್).