Russia attack: ಯುಕ್ರೇನ್ ರಾಜಧಾನಿ ಕೈವ್‌ನಲ್ಲಿರುವ ಅಪಾರ್ಟ್‌ಮೆಂಟ್ ಬ್ಲಾಕ್‌ಗಳ ಮೇಲೆ ಗುರುವಾರ (ಆಗಸ್ಟ್,28) ರಷ್ಯಾ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಮೂಲಕ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿರು ಯುಕ್ರೇನಿಯನ್ ಪ್ರಾಸಿಕ್ಯೂಟರ್‌ಗಳು ಕೈವ್ ಮೇಲೆ ದೊಡ್ಡ ಪ್ರಮಾಣದ ರಷ್ಯಾದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 2ರಿಂದ 10ಕ್ಕೆ ಏರಿದೆ ಎಂದು ಹೇಳಿದ್ದಾರೆ. ಇವರಲ್ಲಿ ಒಂದು ಮಗು ಸೇರಿದಂತೆ ಹತ್ತು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ದಾಳಿಯಲ್ಲಿ ನಾಲ್ವರು ಮಕ್ಕಳು ಮತ್ತು ಒಬ್ಬ ಹದಿಹರೆಯದವರು ಸೇರಿದಂತೆ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಪ್ರಾಸಿಕ್ಯೂಟರ್ ಜನರಲ್ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ.
ಈ ದಾಳಿಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾ ದಾಳಿಯು ಒಂದು ಅಪಾರ್ಟ್‌ಮೆಂಟ್ ಬ್ಲಾಕ್‌ನಲ್ಲಿ ಐದು ಅಂತಸ್ತಿನ ಮೇಲೆ ಸ್ಫೋಟಿಸಿ, ಕಟ್ಟಡವನ್ನು ಎರಡು ಭಾಗಗಳಾಗಿ ಸೀಳಿದೆ ಎಂದು ಹೇಳಿದ್ದು, ದಾಳಿಗೆ ಬಳಗಾಗಿರುವ ಕಟ್ಟಡಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಒಳನುಸುಳಲು ಯತ್ನಿಸಿದ ಉಗ್ರರಿಬ್ಬರನ್ನು ಬಗ್ಗುಬಡಿದ ಭಾರತೀಯ ಸೇನೆ! 5 ಭಯೋತ್ಪಾದಕರು ಅಡಗಿರುವ ಶಂಕೆ| terrorists
ಮುಂದುವರೆದು ಮಾತನಾಡಿರುವ ಯುಕ್ರೇನ್ ಅಧ್ಯಕ್ಷ, ಸುತ್ತಮುತ್ತಲಿನ ಬ್ಲಾಕ್‌ನಲ್ಲಿರುವ ವಸತಿ ಕಟ್ಟಡಗಳು ಮತ್ತು ಸಣ್ಣ ವ್ಯವಹಾರಗಳ ಕಿಟಕಿಗಳು ಹಾರಿಹೋಗಿವೆ. ದಾಳಿಯಲ್ಲಿ ಪುಡಿಪುಡಿಯಾದ ಬಾಲ್ಕನಿಗಳಿಂದ ನೇತಾಡುತ್ತಿದ್ದ ಹಾಸಿಗೆಗಳು ಹಾರಿಹೋಗಿವೆ ಎಂದು ಹೇಳಿದ್ದಾರೆ.
ರಷ್ಯಾ ಮಾತುಕತೆಯ ಬದಲು ಬ್ಯಾಲಿಸ್ಟಿಕ್ಸ್ ದಾಲಿಯನ್ನು ಆಯ್ಕೆ ಮಾಡುತ್ತದೆ. ಇದು ಯುದ್ಧವನ್ನು ಕೊನೆಗೊಳಿಸುವ ಬದಲು ಕೊಲ್ಲುವುದನ್ನು ಮುಂದುವರಿಸಲು ಆಯ್ಕೆ ಆಗಿದೆ ಎಂದು ಝೆಲೆನ್ಸ್ಕಿ ತಿಳಿಸಿದರು. ಇದರರ್ಥ ರಷ್ಯಾ ಇನ್ನೂ ಯಾವ ಪರಿಣಾಮಗಳ ಬಗ್ಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಯುಕ್ರೇನ್ ಅಧ್ಯಕ್ಷ ತಿಳಿಸಿದ್ದಾರೆ.
ಝೆಲೆನ್ಸ್ಕಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯ ಅವಕಾಶಗಳನ್ನು ಕ್ರೆಮ್ಲಿನ್ ತಿರಸ್ಕರಿಸಿದ ಒಂದು ದಿನದ ನಂತರ ಈ ದಾಳಿಗಳು ನಡೆದಿವೆ. (ಏಜೆನ್ಸೀಸ್)