Moscow: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ರಷ್ಯಾದ ಸಂಪೂರ್ಣ ಬೆಂಬಲವಿದೆ ಜೊತೆಗೆ ಪೈಪ್‌ಲೈನ್‌ನಲ್ಲಿ ಮಿಲಿಟರಿ ಆದೇಶಗಳನ್ನು ತ್ವರಿತವಾಗಿ ಪೂರೈಸುವ ಭರಸವೆ ನೀಡಿದೆ ಎಂದು ರಷ್ಯಾ ಭೇಟಿಯಲ್ಲಿರುವ ರಾಜ್ಯ ಸಚಿವ ಸಂಜಯ್ ಸೇಠ್ ಶನಿವಾರ (ಮೇ.10) ತಿಳಿಸಿದ್ದಾರೆ.
ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸೋವಿಯತ್ ಒಕ್ಕೂಟದ ವಿಜಯದ 80 ನೇ ವಾರ್ಷಿಕೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸೇಠ್, ರಷ್ಯಾದ ಉಪ ರಕ್ಷಣಾ ಸಚಿವ ಕರ್ನಲ್ ಜನರಲ್ ಅಲೆಕ್ಸಾಂಡರ್ ಫೋಮಿನ್ ಅವರನ್ನು ಭೇಟಿ ಮಾಡಿ ಮಿಲಿಟರಿ ಮತ್ತು ತಾಂತ್ರಿಕ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಚರ್ಚಿಸಿದರು.
ಇದನ್ನೂ ಓದಿ: ನಮ್ಮ ಊರುಗಳು ಬಿಡಲ್ಲ.. ಸಂದರ್ಭ ಬಂದ್ರೆ ನಮ್ಮ ಸೈನಿಕರ ಜತೆ ನಿಲ್ಲುತ್ತೇವೆ: Ind-Pak ಗಡಿ ಹಳ್ಳಿಗರ ಮಾತುಗಳು ಇಲ್ಲಿವೆ
ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ರಷ್ಯಾದ ಬೆಂಬಲವಿದ್ದು, ಈಗಿರುವ ಒಪ್ಪಂದದಂತೆ ಭಾರತ ಮತ್ತು ರಷ್ಯಾ ನಡುವೆ ಪರಸ್ಪರ ರಕ್ಷಣಾ ವಲಯದ ಸಹಕಾರವಿರಲಿದೆ ಎಂದು ತಿಳಿಸಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ಭಾರತದ ನಿಲುವಿಗೆ ರಷ್ಯಾ ಸಹಕಾರ ನೀಡುತ್ತಿರುವುದಕ್ಕೆ ಸಂಜಯ್ ಸೇರ್ ಅವರು ಧನ್ಯವಾದ ಹೇಳಿದ್ದಾರೆ.
ರಷ್ಯಾದ ಭೇಟಿಯ ವೇಳೆ ಸಂಜಯ್ ಸೇಠ್ ಶುಕ್ರವಾರ ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ರಷ್ಯಾದ ಅಧ್ಯಕ್ಷ ವಾದ್ದಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಮೂರು ಬಾರಿ ಸಾಧ್ಯವಾಗಿದ್ದು, ಅವರ ವಿನಮ್ರ ಸ್ವಭಾವದಿಂದ ಆಕರ್ಷಿತನಾಗಿದ್ದೇನೆ. ರಷ್ಯಾದ ಹವಾಮಾನ ತಣ್ಣಗಿದ್ದಷ್ಟೂ, ಭಾರತದ ಜೊತೆಗಿನ ರಷ್ಯಾದ ಸಂಬಂಧ ಬೆಚ್ಚಗಿರುತ್ತದೆ ಎಂದರು.
ಪಹಲ್ಯಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅಥವಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿದೇಶ ಪ್ರವಾಸ ಮಾಡಲು ಸಾಧ್ಯವಾಗದ ಕಾರಣ, ವಿಜಯ ದಿನದ ಪರೇಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸೇಠ್ ಅವರನ್ನು ಆಯ್ಕೆ ಮಾಡಲಾಯಿತು.(ಏಜೆನ್ಸೀಸ್)