ಬೆಳಗಾವಿ:ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಟ್ಯಾಂಕರ್ ಹರಿದ ಪರಿಣಾಮ ಸ್ಥಳದಲ್ಲಿಯೇ ಮೂವರು(Three Die) ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಪುಣೆ- ಬೆಂಗಳೂರು ಹೆದ್ದಾರಿ(4) ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿ ಭಾನುವಾರ ನಡೆದಿದೆ.
ಇದನ್ನೂ ಓದಿ:ಇದೇ ಟೀಮ್ IPL 2025ರ ಟ್ರೋಫಿ ಗೆಲ್ಲಲಿದೆ; ಇವರೇ ಮ್ಯಾನ್ ಆಫ್ ದಿ ಮ್ಯಾಚ್ ವಿನ್ನರ್: ವಾರ್ನರ್ ಭವಿಷ್ಯ!
ಇನ್ನು ಘಟನೆಯಲ್ಲಿ ಮೂವರು ಮಹಿಳಾ ಕಾರ್ಮಿಕರು ಗಂಭೀರವಾಗಿ ಗಾಯಹಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕಲಬುರಗಿ ಜಿಲ್ಲಯ ಚಿಂಚೋಳಿ ತಾಲೂಕಿನ ಶಿರೋಳಿ ಗ್ರಾಮದ ರಾಮಚಂದ್ರ ಜಾಧವ್ (45), ಅವರ ಪುತ್ರ ಮಹೇಶ್ (18) ಹಾಗೂ ರಾಮಣ್ಣ (38) ಎಂಬವರು ಮೃತಪಟ್ಟವರು.
ಇದನ್ನೂ ಓದಿ:ಪ್ರತಿಭಟನೆ ನಿಗ್ರಹ ವೇಳೆ 1500 ಜನರ ಬಲಿ; ಬಾಂಗ್ಲಾ ಮಾಜಿ ಪ್ರಧಾನಿ ವಿರುದ್ಧ ಅಪರಾಧ ಆರೋಪಗಳ ವಿಚಾರಣೆ| sheikh-hasina
ಇಂದು ಬೆಳಗ್ಗೆ ಇಟಗಿ ಕ್ರಾಸ್ ಬಳಿಯ ಹೆದ್ದಾರಿಯಲ್ಲಿ ಕೂಲಿ ಕಾರ್ಮಿಕರು ಎದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಬಂದ ಆಯಿಲ್ ಟ್ಯಾಂಕರ್ ಏಕಾಏಕಿ ಕಾರ್ಮಿಕರ ಮೇಲೆ ಹರಿದಿದೆ.ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.