ನ್ಯೂಸ್

ಅಪ್ಪು ನೆನಪಿನಲ್ಲಿ ಧಾರವಾಡದಿಂದ ಬೆಂಗಳೂರಿಗೆ ಓಡಿಬರುತ್ತಿದ್ದಾರೆ ಮಹಿಳಾ ಅಭಿಮಾನಿ..!

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್ ನಿಧನರಾಗಿ ಅ.29ಕ್ಕೆ ಒಂದು ವರ್ಷ ಕಳೆಯುತ್ತದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ರಾಜ್ಯದಾದ್ಯಂತ ಒಂದಿಲ್ಲೊಂದು ಸಾಮಜಮುಖಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಇದೀಗ ಅವರ ಮಹಿಳಾ ಅಭಿಮಾನಿಯೊಬ್ಬರು ಧಾರವಾಡದಿಂದ ಬೆಂಗಳೂರಿನವರೆಗೆ ಓಟ ಆರಂಭಿಸಿದ್ದಾರೆ.

ದಾಕ್ಷಾಯಿಣಿ ಅವರು ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಿಂದ ಓಟ ಆರಂಭಿಸಿ, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿವರೆಗೆ ಓಡಲಿದ್ದಾರೆ. ಅ.29ರಂದೇ ಗುರಿ ತಲುಪಲು ಯೋಜನೆ ಹಾಕಿಕೊಂಡಿದ್ದಾರೆ.

ಮೂವರು ಮಕ್ಕಳ ತಾಯಿಯಾಗಿರುವ ದಾಕ್ಷಾಯಿಣಿ, ಮೂಲತಃ ಅಥ್ಲೀಟ್. ಪುನೀತ್​​ ಮೃತಪಟ್ಟು ಕೆಲವು ದಿನಗಳ ನಂತರವೂ ದಾಕ್ಷಾಯಿಣಿ ಹೀಗೆಯೇ ಬೆಂಗಳೂರಿನವರೆಗೆ ಓಡಿದ್ದರು.!