ನ್ಯೂಸ್

ಬಹುಮಾನ ತಂದುಕೊಟ್ಟ ನಿಯಮಪಾಲನೆ

ಕೋವಿಡ್-19 ಸೋಂಕು ತಗಲುವುದನ್ನು ತಡೆಯಲು ಕೈಗೊಂಡ ಮುಂಜಾಗ್ರತೆಯ ಕ್ರಮಗಳಲ್ಲಿ ಮಾಸ್ಕ್ ಧಾರಣೆಯೂ ಒಂದು. ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಕಾಫಿ ಮಳಿಗೆಯೊಂದಕ್ಕೆ ಮಾಸ್ಕ್ ಧರಿಸದೆ ಬಂದಿದ್ದ ಆಂಬರ್ ಲಿನ್ ಗಿಲ್ಸ್ ಎಂಬಾಕೆ ಕಾಫಿಗೆ ಆರ್ಡರ್ ಮಾಡಿದ್ದಳು. ಆದರೆ ಮಾಸ್ಕ್ ಧರಿಸದ ಕಾರಣ ಕಾಫಿ ಕೊಡಲು ನಿರಾಕರಿಸಿದ ಮಳಿಗೆಯ ಲೆನಿನ್ ಎಂಬಾತ ಆಕೆಯನ್ನು ಹೊರಗೆ ಕಳುಹಿಸಿದ.

ಇದರಿಂದ ಕೋಪಿಸಿಕೊಂಡ ಆಕೆ ಫೇಸ್​ಬುಕ್​ನಲ್ಲಿ ಲೆನಿನ್ ಹಾಗೂ ಕಾಫಿ ಮಳಿಗೆಯ ಫೋಟೋ ಹಾಕಿ ತನ್ನ ಅಳಲನ್ನು ತೋಡಿಕೊಂಡಿದ್ದಳು. ಆದರೆ ನೆಟ್ಟಿಗರು ಗಿಲ್ಸ್​ಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆನ್​ಲೈನ್​ನಲ್ಲೇ 83 ಸಾವಿರ ಡಾಲರ್​ಗಿಂತ ಹೆಚ್ಚು ದೇಣಿಗೆ ಸಂಗ್ರಹಿಸಿ ಲೆನಿನ್​ಗೆ ಕಳುಹಿಸಿಕೊಟ್ಟಿದ್ದಾರೆ.