ರಾಯಚೂರು: ಸ್ಕಾರ್ಪಿಯೋ ಕಾರು ಮತ್ತು ಬೈಕ್ ಮಧ್ಯೆ ಉಂಟಾದ ಅಪಘಾತದಿಂದ ಆರ್ಟಿಓ ಸಿಬ್ಬಂದಿ ಮೃತ ಪಟ್ಟಿರುವ ಘಟನೆ ನಗರದ ಆರ್ಟಿಓ ಸರ್ಕಲ್ನಲ್ಲಿ ನಡೆದಿದೆ. ಚಂದ್ರಕಾಂತ್(34) ಮೃತ ಆರ್ಟಿಓ ಸಿಬ್ಬಂದಿ. ಚಂದ್ರಕಾಂತ್ ಜತೆಗೆ ಬೈಕ್ನಲ್ಲಿದ್ದ ನಿಲೇಶ್ ಅಪಘಾತದಿಂದ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಗರದ ಆರ್ಟಿಓ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಚಂದ್ರಕಾಂತ್, ಬೈಕ್ನಲ್ಲಿ ಆರ್ಟಿಓ ಸರ್ಕಲ್ನಿಂದ ಬಿಆರ್ಬಿ ಸರ್ಕಲ್ಗೆ ತೆರಳುತ್ತಿದ್ದರು. ಈ ವೇಳೆ ಆರ್ಟಿಓ ಸರ್ಕಲ್ ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿಯಾಗಿದೆ.
ಸದ್ಯ ಸ್ಕಾರ್ಪಿಯೋ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ಬಗ್ಗೆ ರಾಯಚೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.