ಬೆಂಗಳೂರು: ರಾಜ್ಯದ 45 ಲಕ್ಷ ರೈತರ ಮನೆ ಬಾಗಿಲಿಗೆ ನೇರವಾಗಿ ಉಚಿತ ಆರ್ಟಿಸಿ ಮತ್ತು ಜಮೀನಿನ ನಕಾಶೆ ವಿತರಣೆ ಯೋಜನೆ ಜ.20ರಿಂದ ಜಾರಿಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಿನ ಕೂಸು ‘ಮನೆ ಬಾಗಿಲಿಗೆ ಸರ್ಕಾರದ ಯೋಜನೆ’ ತಲುಪಿಸುವ ಕಾರ್ಯ ಶೀಘ್ರ ಜಾರಿಗೆ ಬರಲಿದೆ. ಇದರ ಅಂಗವಾಗಿ ರಾಜ್ಯದಲ್ಲಿ ಸುಮಾರು 45 ಲಕ್ಷ ರೈತರಿದ್ದು, ಅವರಿಗೆ ತಮ್ಮ ಜಮೀನಿನ ಪಹಣಿ, ಆರ್ಟಿಸಿ ಹಾಗೂ ಜಮೀನಿನ ನಕಾಶೆ ಯಾವ ರೀತಿಯಲ್ಲಿದೆ ಎಂದು ತಿಳಿದಿರುವುದಿಲ್ಲ. ಹೊಲದ ಮೇಲೆ ಸಾಲ ಅಥವಾ ಮಾರಾಟ ಮಾಡಲು ಮುಂದಾದಾಗ ಮಾತ್ರ ಅದನ್ನು ವೀಕ್ಷಣೆ ಮಾಡುತ್ತಾರೆ. ರೈತರಿಗೆ ತಮ್ಮ ಜಮೀನಿನ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಲು ಅನುಕೂಲ ಆಗುವಂತೆ ಉಚಿತ ಆರ್ಟಿಸಿ ಮತ್ತು ನಕಾಶೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿವರಿಸಿದರು.
ಒಂದೇ ದಿನದಲ್ಲಿ ಭೂ ಪರಿವರ್ತನೆ: ಪ್ರಸ್ತುತ ರೈತರು ತಮ್ಮ ಜಮೀನನ್ನು ವಸತಿ ಅಥವಾ ವಿವಿಧ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಮುಂದಾದರೆ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ 6 ತಿಂಗಳಿಂದ 1 ವರ್ಷದವರೆಗೆ ಅಲೆದಾಡಬೇಕಾಗಿದೆ. ಇದಕ್ಕಾಗಿ 16ರಿಂದ 17 ನಿರಾಕ್ಷೇಪಣೆ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಇದನ್ನು ಸರಳೀಕರಣ ಮಾಡಲು ಸರ್ಕಾರ ಮುಂದಾಗಿದ್ದು, ಯಾವುದೇ ರೈತರು ತಮ್ಮ ಭೂಮಿಯನ್ನು ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಪರಿವರ್ತನೆ ಮಾಡಿಕೊಡಬೇಕು. ಯಾವುದೇ ತಕರಾರು ಕೂಡ ಮಾಡಬಾರದು ಎಂದು ಸೂಚನೆ ರವಾನಿಸಲಾಗುತ್ತದೆ. ಈ ಬಗ್ಗೆ ಚರ್ಚೆ ಮಾಡಲಾಗಿದ್ದು, ಶೀಘ್ರ ಈ ಯೋಜನೆಯನ್ನೂ ಜಾರಿಗೆ ತರಲಾಗುತ್ತದೆ ಎಂದು ಆರ್.ಅಶೋಕ್ ತಿಳಿಸಿದರು.
15.45 ಲಕ್ಷ ರೈತರಿಗೆ ಪರಿಹಾರ: ರಾಜ್ಯದಲ್ಲಿ ಮಳೆಯಿಂದ ಬೆಳೆ ಹಾನಿಯಾದರೆ ಪ್ರತಿವರ್ಷ ರೈತರಿಗೆ ಒಂದು ವರ್ಷದ ನಂತರ ಪರಿಹಾರ ಸಿಗುತ್ತಿತ್ತು. ಈ ವರ್ಷ ಮಳೆಯಿಂದ 11.64 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿತ್ತು. ಈ ವೇಳೆ ಸಿಎಂ ಬೊಮ್ಮಾಯಿ ಒಂದೇ ತಿಂಗಳಲ್ಲಿ ಪರಿಹಾರ ನೀಡುವಂತೆ ಸೂಚಿಸಿದ್ದರಿಂದ 15.45 ಲಕ್ಷ ರೈತರಿಗೆ 1,003 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ ವಾಗಿದೆ. ಕಂದಾಯ ಇಲಾಖೆಯಿಂದ ಮನೆ ಬಾಗಿಲಿಗೆ ವೃದ್ಯಾಪ್ಯವೇತನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಈಗ ಯಾವುದೇ ಮನೆ ಯಲ್ಲಿ 60 ವರ್ಷ ಮೇಲ್ಪಟ್ಟವರು ಇದ್ದರೆ ಅವರ ಆಧಾರ್ ಕಾರ್ಡ್ನ ಮಾಹಿತಿ ಅಧರಿಸಿ ಒಂದೇ ದಿನದಲ್ಲಿ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ವೇತನ ಪಾವತಿಸಲಾಗುತ್ತಿದೆ ಎಂದು ಅಶೋಕ್ ತಿಳಿಸಿದರು.
ಕಟ್ಟೇಹೊಳೆ ಗ್ರಾಮದ ಇಂಥವನಾದ ನಾನು ಕೂಡಲಿ ಅಕ್ಷೋಭ ತೀರ್ಥ ಮಠಕ್ಕೆ ತಪ್ಪು ಮಾಹಿತಿ ನೀಡಿ ಪಿರಮೇನಹಳ್ಳಿ ಗ್ರಾಮದ ಸರ್ವೆ ನಂ.6/5ರಲ್ಲಿರುವ 1.21 ಎಕರೆ ಜಾಗವನ್ನು ನನ್ನ ಹೆಸರಿಗೆ (ಜಿಪಿಎ ಹೋಲ್ಡರ್) ಬರೆದುಕೊಟ್ಟ ದಾನಪತ್ರದ ಮೂಲಕ ನೋಂದಣಿ ಮಾಡಿಸಿಕೊಂಡಿದ್ದೇನೆ. ಗ್ರಾಮಕ್ಕೆ ಸಂಬಂಧಿಸಿದ ಜಾಗವನ್ನು ಜಿಲ್ಲಾಧಿಕಾರಿ ಅಥವಾ ಜಿಪಂ ಸಿಇಒ ಮೂಲಕ ಕಾನೂನು ರೀತ್ಯಾ ಹಿಂದಿರುಗಿಸುತ್ತೇನೆ ಎಂದು ಗ್ರಾಮಸ್ಥರು ನಡೆಸಿದ ರಾಜಿ ಪಂಚಾಯಿತಿಯಲ್ಲಿ ಬರೆದುಕೊಟ್ಟಿದ್ದಾನೆ.