ನ್ಯೂಸ್

393 ರೂ. ಇದ್ದ ಬ್ಯಾಂಕ್​ ಷೇರು ಈಗ ಕೇವಲ 24 ರೂಪಾಯಿ: 2019ರ ಚುನಾವಣೆ ಸಂದರ್ಭದಲ್ಲಿ ಬೆಲೆ ಹೆಚ್ಚಾದಂತೆಯೇ ಈಗ ಪುನರಾವರ್ತನೆಯೇ?: ಇಲ್ಲಿದೆ ವಿಶ್ಲೇಷಣೆ…

ಮುಂಬೈ: ಯೆಸ್​ ಬ್ಯಾಂಕ್​ ಷೇರುಗಳಿಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೇಡಿಕೆ ಬರುತ್ತಿದ್ದು, ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ.

ಕಳೆದ ಒಂದು ತಿಂಗಳಲ್ಲಿ ಈ ಷೇರುಗಳ ಬೆಲೆ 18.05%ರಷ್ಟು ಹೆಚ್ಚಾಗಿದೆ. ಮೂರು ತಿಂಗಳಲ್ಲಿ 55.31% ಏರಿಕೆ ಕಂಡಿದೆ.

2019 ರಲ್ಲಿ, ಚುನಾವಣಾ ಸಮಯದಲ್ಲಿ ಕೂಡ ಈ ಸ್ಟಾಕ್ 21 ಪ್ರತಿಶತದಷ್ಟು ಹೆಚ್ಚಾಗಿತ್ತು. ಈಗ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮತ್ತದೇ ಪ್ರವೃತ್ತಿ ಕಂಡುಬರುತ್ತಿದೆ. 2019 ರಲ್ಲಿ ಚುನಾವಣಾ ರಾಜಕೀಯ ವಾತಾವರಣದ ಹೊರತಾಗಿಯೂ, ಜನವರಿಯಲ್ಲಿ ಬಿಡುಗಡೆಯಾದ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳಿಂದ ಷೇರುಗಳು ಬೆಂಬಲವನ್ನು ಪಡೆದಿದ್ದವು. ಈ ಬಾರಿಯೂ ಇದೇ ಬೆಳವಣಿಗೆ ಪುನರಾವರ್ತಿತವಾಗುವ ಪರಿಸ್ಥಿತಿ ಕಂಡು ಬರುತ್ತಿದೆ.

ಅಚ್ಚರಿಯ ಸಂಗತಿ ಎಂದರೆ, 2018ರ ಆಗಸ್ಟ್ 17ರಂದು ಈ ಷೇರಿನ ಬೆಲೆ 393.20 ರೂಪಾಯಿ ತಲುಪಿತ್ತು. ಆದರೆ, ಈಗ 28.85 ರೂಪಾಯಿ ಇದೆ. ಈಗ ಏರುಗತಿ ಇರುವುದರಿಂದ ಭವಿಷ್ಯದಲ್ಲಿ ಈ ಷೇರು 38 ರಿಂದ 84 ರೂಪಾಯಿವರೆಗೆ ಹೆಚ್ಚಳ ಕಾಣಬಹುದು ಎಂದು ವಿಶ್ಲೇಷಕರ ಲೆಕ್ಕಾಚಾರವಾಗಿದೆ.

2019 vs 2024ರ ಚುನಾವಣೆ:

2019 ರ ವರ್ಷದಲ್ಲಿ, ಯೆಸ್ ಬ್ಯಾಂಕ್‌ನ ಷೇರುಗಳು ಡಿಸೆಂಬರ್ 31, 2018 ರಂದು ರೂ 181.75 ತಲುಪಿದ್ದವು. ನಂತರ, ಜನವರಿ 25, 2019 ರಂದು, ಈ ಷೇರುಗಳು ಅಂದಾಜು 21 ಪ್ರತಿಶತದಷ್ಟು ಏರಿಕೆ ಕಂಡು, 219.65 ರ ಬೆಲೆಗೆ ಬಂದವು. ಡಿಸೆಂಬರ್ 2018 ರ ತ್ರೈಮಾಸಿಕದ ಫಲಿತಾಂಶಗಳನ್ನು ಜನವರಿ 23, 2019 ರಂದು ಪ್ರಕಟಿಸಲಾಗಿತು.

2019 ರ ಸಂಪೂರ್ಣ ಹಣಕಾಸು ವರ್ಷದ ಆರ್ಥಿಕ ಫಲಿತಾಂಶಗಳ ಸಮಯ ಬಂದಾಗ ಷೇರುಗಳು ಬೆಲೆ 237.70 ರೂ. ಮಟ್ಟಕ್ಕೆ ಏರಿದೆ. ಅಂದು ವರ್ಷದ ವಾರ್ಷಿಕ ಫಲಿತಾಂಶವನ್ನು 25 ಏಪ್ರಿಲ್ 2019 ರಂದು ಪ್ರಕಟಿಸಲಾಗಿತ್ತು.

ಈ ವರ್ಷದ 2024 ರ ಸಂದರ್ಭದಲ್ಲಿ, ಈ ಬ್ಯಾಂಕಿನ ಷೇರಿನ ಬೆಲೆಯು 2023, ಡಿಸೆಂಬರ್ 29, 2023 ರ ಅಂತಿಮ ವಹಿವಾಟಿನ ದಿನದಂದು 21.46 ರೂಪಾಯಿಗೆ ತಲುಪಿತ್ತು.

2024 ರ ಜನವರಿ 25 ರಂದು ಇದು ಅಂದಾಜು 16 ಪ್ರತಿಶತದಷ್ಟು ಏರಿ 24.88 ರೂ.ಗೆ ತಲುಪಿತು.

2023 ರ ಅಕ್ಟೋಬರ್ 23 ರಂದು ಯೆಸ್ ಬ್ಯಾಂಕ್ ಷೇರುಗಳ ಬಲೆ 14.10 ರೂಪಾಯಿಯ ಕನಿಷ್ಠ ಮಟ್ಟದಲ್ಲಿತ್ತು. ಇದನ್ನು ಅನುಸರಿಸಿ, ಕೇವಲ 2 1/2 ತಿಂಗಳುಗಳಲ್ಲಿ ಇದು 86 ಪ್ರತಿಶತದಷ್ಟು ಅಧಿಕವಾಯಿತು.

ಯೆಡ್​ ಬ್ಯಾಂಕ್ ಲಿಮಿಟೆಡ್ (Yes Bank Ltd.) ವಾಣಿಜ್ಯ ಬ್ಯಾಂಕಿಂಗ್ ಸೇವೆಗಳು ಮತ್ತು ಉತ್ಪನ್ನಗಳನ್ನು ನೀಡುತ್ತದೆ. ಇದು ಭಾರತದ ಮುಂಬೈನಲ್ಲಿರುವ ಬ್ಯಾಂಕ್ ಆಗಿದೆ. ಇದನ್ನು 2004 ರಲ್ಲಿ ಸ್ಥಾಪಿಸಲಾಯಿತು. ಇದು ತನ್ನ ಗ್ರಾಹಕರಿಗೆ ಕಾರ್ಪೊರೇಟ್ ಮತ್ತು ವಾಣಿಜ್ಯ ಶಾಖೆಗಳನ್ನು ಒದಗಿಸುತ್ತದೆ.